ಸುರಪುರ: ಆಸ್ತಿ ವಿಚಾರವಾಗಿ ತಾಲೂಕಿನ ಮಾಲಗತ್ತಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದ ರಂಗಯ್ಯ ಗುತ್ತೇದಾರ ಎಂಬ ವ್ಯಕ್ತಿಯ ಕೊಲೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಆಸ್ತಿ ವಿಚಾರವಾಗಿ ವ್ಯಕ್ತಿ ಕೊಲೆ: ಪೊಲೀಸರ ನಿರ್ಲಕ್ಷ್ಯವೇ ಕಾರಣವೆಂದ ಕುಟುಂಬಸ್ಥರು - Rangaya murder accused of negligence of police
ಸುರಪುರ ತಾಲೂಕಿನ ಮಾಲಗತ್ತಿಯಲ್ಲಿ ಆಸ್ತಿ ವಿಚಾರಕ್ಕೆ ನಡೆದ ವ್ಯಕ್ತಿಯ ಕೊಲೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮೃತ ವ್ಯಕ್ತಿಯ ಸ್ವಂತ ಊರಾದ ಜೇವರ್ಗಿ ತಾಲೂಕಿನ ಇಜೇರಿ ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ತೆಗೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಕುಟುಂಬಸ್ಥರು ಆರೋಪಿಸಿದ್ದಾರೆ.ಈ ಕುರಿತು ಮೃತ ವ್ಯಕ್ತಿಯ ಪತ್ನಿ ಸಾವಿತ್ರಿ ಮಾತನಾಡಿ,ಮಾಲಗತ್ತಿ ಗ್ರಾಮದ ನನ್ನ ಒಡ ಹುಟ್ಟಿದ ತಮ್ಮಂದಿರಾದ ಶರಣಗೌಡ ಮತ್ತು ವಿಠ್ಠಲ ಎನ್ನುವವರು ನನ್ನ ಗಂಡನ ಕೊಲೆ ಮಾಡಿದ್ದು,ಅವರಿಗೆ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದಾರೆ.
ಮೃತ ವ್ಯಕ್ತಿಯ ಶವ ಸಂಸ್ಕಾರಕ್ಕೂ ಮೊದಲೂ ಅವರ ಮನೆಯ ಬಳಿ ಇರಿಸಲಾಗಿದ್ದು, ಕುಟುಂಬಸ್ಥರ ಹಾಗು ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಎಲ್ಲರು ಕೂಡ ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸುತ್ತಿದ್ದಾರೆ.