ಕರ್ನಾಟಕ

karnataka

ETV Bharat / state

ಕೃಷ್ಣಾ ನದಿ ಪಾತ್ರದ ಗ್ರಾಮಗಳಿಗೆ ಶಾಸಕ ರಾಜುಗೌಡ ಭೇಟಿ - Surapura MLA Rajugowda

ಮಹಾ ಮಳೆಯಿಂದಾಗಿ ಉಕ್ಕಿ ಹರಿಯುತ್ತಿರುವ ಕೃಷ್ಣ ನೀರಿನಿಂದ ಸುರಪುರದ ಹಲವೆಡೆ ಜಮೀನು ಜಲಾವೃತವಾಗಿದೆ. ಕೃಷ್ಣಾ ನದಿ ಪಾತ್ರದ ಕೆಲ ಗ್ರಾಮಗಳಿಗೆ ಶಾಸಕ ರಾಜುಗೌಡ ಭೇಟಿ ನೀಡಿದರು.

ಶಾಸಕ ರಾಜುಗೌಡ ಭೇಟಿ

By

Published : Aug 5, 2019, 2:31 PM IST

ಯಾದಗಿರಿ:ಕೃಷ್ಣಾ ನದಿ ಪಾತ್ರದ ಕೆಲವು ಪ್ರದೇಶಗಳಿಗೆ ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ ರಾಜುಗೌಡ ಭೇಟಿ ನೀಡಿ ಗ್ರಾಮಸ್ಥರಿಗೆ ಅಭಯ ನೀಡಿದ್ದಾರೆ.

ಬಸವಸಾಗರ ಜಲಾಶಯದಿಂದ ಕೃಷ್ಣ ನದಿಗೆ 2,90,976 ಕ್ಯೂಸೆಕ್ ನೀರು ಹರಿಸಿದ ಹಿನ್ನೆಲೆ ಹಲವೆಡೆ ಜಮೀನು ಜಲಾವೃತವಾಗಿದ್ದು, ಅಪಾರ‌ ಪ್ರಮಾಣದ ಬೆಳೆ ನಾಶವಾಗಿದೆ. ಈ ನದಿ ಪಾತ್ರದ ಗ್ರಾಮಗಳಿಗೆ ಶಾಸಕ ರಾಜುಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಾಸಕ ರಾಜುಗೌಡ ಭೇಟಿ

ಸುರಪುರ ವಿಧಾನಸಭಾ ಕ್ಷೇತ್ರದ ಕೃಷ್ಣಾ ನದಿ ಪಾತ್ರದ ಪ್ರದೇಶಗಳಾದ ಹೆಮ್ಮಡಗಿ, ಸೂಗರ, ಚೌಡೇಶ್ವರ ಹಳ್ಳ, ಶೆಳ್ಳಗಿ ಪ್ರದೇಶಗಳಿಗೆ ತೆರಳಿ ಗ್ರಾಮಸ್ಥರನ್ನು ಭೇಟಿ ಮಾಡಿದ್ದಾರೆ. ಅಲ್ಲದೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

ಇನ್ನು ನದಿ ಪಾತ್ರದ ಗ್ರಾಮಸ್ಥರು ಸೇತುವೆಗಳ ಹತ್ತಿರ ಹೋಗದಂತೆ ಎಚ್ಚರ ವಹಿಸಬೇಕೆಂದು ಪೊಲೀಸ್ ಸಿಬ್ಬಂದಿ ಹಾಗೂ ಗ್ರಾಮಸ್ಥರಿಗೆ ಶಾಸಕರು ಸೂಚನೆ ನೀಡಿದರು.

ABOUT THE AUTHOR

...view details