ಸುರಪುರ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾರಹುಣ್ಣಿಮೆ ಹಬ್ಬವನ್ನು ವಿಶಿಷ್ಟವಾಗಿ ಆಚರಣೆ ಮಾಡಲಾಯಿತು.
ಸುರಪುರ: ಗುಂಡು ಎತ್ತುವ ಮೂಲಕ ಕಾರ ಹುಣ್ಣಿಮೆ ಸಂಭ್ರಮಿಸಿದ ರೈತರು - ಸುರಪುರ ಕಾರಹುಣ್ಣಿಮೆ ಆಚರಣೆ
ಸುರಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾರ ಹುಣ್ಣಿಮೆ ಹಬ್ಬವನ್ನ ವಿಶಿಷ್ಟವಾಗಿ ಆಚರಣೆ ಮಾಡಲಾಯಿತು.
ಸುರಪುರ ತಾಲೂಕಿನ ಅನೇಕ ಗ್ರಾಮಗಳಲ್ಲಿ ಪ್ರತಿ ವರ್ಷ ಮಳೆಗಾಲ ಆರಂಭದ ಸಮಯದಲ್ಲಿ ಬರುವ ಕಾರ ಹುಣ್ಣಿಮೆಯನ್ನ ವಿಭಿನ್ನವಾಗಿ ಆಚರಣೆ ಮಾಡಿಕೊಂಡು ಬಂದಿದ್ದಾರೆ. ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ ರೈತರು ಗುಂಡು ಎತ್ತುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ನಂಬಿಕೆಯಂತೆ ನಿನ್ನೆ ನಡೆದ ಕಾರಹುಣ್ಣಿಮೆ ಹಬ್ಬದ ನಿಮಿತ್ತ ರೈತರು ಹನುಮಂತ ದೇವರ ಗುಡಿ ಮುಂದೆ ಜಮಾಯಿಸಿ, ಐದು ಜನ ಸೇರಿ ದೊಡ್ಡದಾದ ಗುಂಡನ್ನು ಎಲ್ಲರೂ ಒಂದು ಕೈ ಸೇರಿಸುವ ಮೂಲಕ ಎತ್ತಿದರು. ಒಂದರ ನಂತರ ಒಂದರಂತೆ ಮುಂಬರುವ ಮಳೆಗಳ ಬಗ್ಗೆ ಭವಿಷ್ಯ ರೂಪದಲ್ಲಿ ಕೇಳುತ್ತಾ, ಮಳೆಯ ಹೆಸರನ್ನು ಕೂಗುತ್ತಾರೆ. ಗುಂಡು ಮೇಲೆ ಎದ್ದರೆ ಮಳೆ ಬರುತ್ತದೆ ಎಂದು, ಮೇಲೆ ಎಳದಿದ್ದರೆ ಮಳೆ ಬರುವುದಿಲ್ಲವೆಂದು ನಂಬುತ್ತಾರೆ.
TAGGED:
ಸುರಪುರ ಕಾರಹುಣ್ಣಿಮೆ ಆಚರಣೆ