ಸುರಪುರ: ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬೈಚಬಾಳ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರದಾರರಿಂದ ಹಣ ಪಡೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉಚಿತ ರೇಷನ್ ನೀಡಲು ಹಣ ಪಡೆದ ಆರೋಪ: ವಿಡಿಯೋ ವೈರಲ್
ಸಂಗಣ್ಣ ಅಗ್ನಿ ಎಂಬುವರಿಗೆ ಸೇರಿದ ನ್ಯಾಯಬೆಲೆ ಅಂಗಡಿ ಸಂಖ್ಯೆ 18ರಲ್ಲಿ ನೀಲಕಂಠ ರತ್ತಾಳ ಎಂಬ ವ್ಯಕ್ತಿ ಹಣ ವಸೂಲಿ ಮಾಡುತ್ತಿರುವುದಾಗಿ ತಿಳಿದು ಬಂದಿದ್ದು, ವರ್ತಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೈಚಬಾಳ ಗ್ರಾಮದ ನ್ಯಾಯಬೆಲೆ ಅಂಗಡಿ
ಸರ್ಕಾರ ಕೊಡುವ ಉಚಿತ ಪಡಿತರ ಅಕ್ಕಿ ಬೇಕಂದ್ರೆ 10 ರೂ. ಜೊತೆಗೆ ನ್ಯಾಯಬೆಲೆ ಅಂಗಡಿ ವರ್ತಕ ಬೆರಳಚ್ಚು ಪಡೆಯುವುದಕ್ಕೂ 10 ರೂ. ಪಡೆಯುತ್ತಾರೆ ಒಟ್ಟು 20 ರೂ ವಸೂಲಿ ಮಾಡುತ್ತಾರೆ ಎಂಬ ಆರೋಪ ಕೇಳಿಬಂದಿದೆ.
ಸಂಗಣ್ಣ ಅಗ್ನಿ ಎಂಬುವರಿಗೆ ಸೇರಿದ ನ್ಯಾಯ ಬೆಲೆ ಅಂಗಡಿ ಸಂಖ್ಯೆ 18ರಲ್ಲಿ ನೀಲಕಂಠ ರತ್ತಾಳ ಎಂಬ ವ್ಯಕ್ತಿ ಹಣ ವಸೂಲಿ ಮಾಡುತ್ತಿರುವುದಾಗಿ ತಿಳಿದು ಬಂದಿದ್ದು, ವರ್ತಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಹಣ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.