ಸುರಪುರ: ನಗರದ ರಂಗಂಪೇಟೆಯಲ್ಲಿನ ಅಂಬಾಭವಾನಿ ದೇವಸ್ಥಾನದ 50 ನೇ ವಾರ್ಷಿಕೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಪೂಜೆ ಹೋಮ-ಹವನ ನಡೆಸುವ ಮೂಲಕ ಕೊರೊನಾ ನಿರ್ಮೂಲನೆಯಾಗಲೆಂದು ದೇವಿಯಲ್ಲಿ ಪ್ರಾರ್ಥಿಸಲಾಯಿತು.
ಕೊರೊನಾ ನಿರ್ಮೂಲನೆಗೆ ಅಂಬಾಭವಾನಿ ಮೊರೆದ ಹೋದ ಭಕ್ತಗಣ
ಅಂಬಾಭವಾನಿ ದೇವಸ್ಥಾನದ 50ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯದಲ್ಲಿ ಮಹಾಮಾರಿಯಂತೆ ಕಾಡುತ್ತಿರುವ ಕೊರೊನಾ ಹಾವಳಿ ನಿರ್ಮೂಲನೆಯಾಗಲೆಂದು ಹೋಮ ಹವನ ಮಾಡುವ ಮೂಲಕ ಪಾರ್ಥಿಸಲಾಯಿತು.
ಅಂಬಾಭವಾನಿ ದೇವಸ್ತಾನ
50 ನೇ ವಾರ್ಷಿಕೋತ್ಸವಾದರೂ ಅದ್ಧೂರಿಯಾಗಿ ಕಾರ್ಯಕ್ರಮ ಆಚರಿಸುವ ಯೋಜನೆ ಇತ್ತು. ಆದರೆ ಕೊರೊನಾ ವೈರಸ್ ಕಾರಣದಿಂದ ಸರಳವಾಗಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಆಚರಿಸಲಾಗುತ್ತಿದೆ ಎಂದು ದೇವಸ್ಥಾನದ ಭಕ್ತ ರಾಜು ಪುಲಸೆ ತಿಳಿಸಿದರು.
ಬೆಳಗ್ಗೆ ಹೋಮ ಹವನ ನಡೆಸಿದ ನಂತರ ದೇವಿಯ ಆಶೀರ್ವಾದ ರೂಪದಲ್ಲಿ ಅನೇಕ ಬಡ ಕುಟುಂಬಗಳಿಗೆ ಅನ್ನ ಫಲಾಹಾರ ಮತ್ತು ಪ್ರಸಾದ ವಿತರಿಸಲಾಯಿತು.