ಸುರಪುರ: ತಾಲೂಕಿನ ರಾಯಗೇರಾ ಗ್ರಾಮದಲ್ಲಿ ಕೋಳಿ ಪಂದ್ಯಾಟದಲ್ಲಿ ತೊಡಗಿದ್ದ 30 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸುರಪುರ: ಕೋಳಿ ಪಂದ್ಯದಾಟದಲ್ಲಿ ತೊಡಗಿದ್ದ 30 ಮಂದಿಯ ಬಂಧನ - Surapur poultry tournament
ಖಚಿತ ಮಾಹಿತಿ ಮೇರೆಗೆ ಸುರಪುರ ಪೊಲೀಸ್ ಉಪವಿಭಾಗಧಿಕಾರಿ ವೆಂಕಟೇಶ್ ಹುಗಿಬಂಡಿ ಅವರ ನೇತೃತ್ವದ ತಂಡ ದಾಳಿ ನಡೆಸಿ, 30 ಮಂದಿಯನ್ನು ಬಂಧಿಸಿದ್ದಾರೆ. ಈ ವೇಳೆ 30 ಬೈಕ್, 22 ಕೋಳಿಗಳು ಮತ್ತು ಪಂದ್ಯದಲ್ಲಿ ಜೂಜಾಟಕ್ಕೆ ಬಳಸಲಾಗುತ್ತಿದ್ದ 32 ಸಾವಿರ ರೂ. ಜಪ್ತಿ ಮಾಡಿಕೊಂಡಿದ್ದಾರೆ.
ಕೋಳಿ ಪಂದ್ಯಾ

ಈ ಕಾರ್ಯಚರಣೆಯಲ್ಲಿ ಡಿವೈಎಸ್ಪಿ ವೆಂಕಟೇಶ್ ಹುಗಿಬಂಡಿ, ಕೊಡೇಕಲ್ ಪೊಲೀಸ್ ಠಾಣೆ ಪಿಎಸ್ಐ ಬಾಸುಮಿಯಾ ಹಾಗೂ ಪೊಲೀಸ್ ಪೇದೆಗಳು ಇದ್ದರು. ಈ ಸಂಬಂಧ ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.