ಕರ್ನಾಟಕ

karnataka

ETV Bharat / state

ಬೆಟ್ಟಿಂಗ್​​ ಕಾಳಗ​: ಕೋಳಿಗಳ ಸಮೇತ 10ಕ್ಕೂ ಹೆಚ್ಚು ಜನರ ಬಂಧನ - ಸುರಪುರ ಪೊಲೀಸ್ ಠಾಣೆ

ಸುರಪುರ ತಾಲೂಕಿನ ಕಾರ್ನಾಳ ಗ್ರಾಮದ ಹೊರಭಾಗದ ಜಮೀನೊಂದರಲ್ಲಿ ಕೋಳಿಗಳ ಕಾಳಗದ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ 10ಕ್ಕೂ ಹೆಚ್ಚು ಜನರನ್ನ ಕೋಳಿಗಳ ಸಮೇತ ಸುರಪುರ ಪೊಲೀಸರು ಬಂಧಿಸಿದ್ದಾರೆ.

surapur-police-arrest-10-people-who-involved-in-poultry-match
ಕೋಳಿಗಳ ಜೂಜು: ಕೋಳಿಗಳ ಸಮೇತ 10ಕ್ಕೂ ಹೆಚ್ಚು ಜನರ ಬಂಧನ

By

Published : Feb 11, 2021, 7:43 PM IST

ಯಾದಗಿರಿ:ಕೋಳಿ ಪಂದ್ಯ ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ಸುರಪುರ ಪೊಲೀಸರು, ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ 10ಕ್ಕೂ ಹೆಚ್ಚು ಜನರನ್ನ ಕೋಳಿಗಳ ಸಮೇತ ಬಂಧಿಸಿದ್ದಾರೆ.

ಜಿಲ್ಲೆಯ ಸುರಪುರ ತಾಲೂಕಿನ ಕಾರ್ನಾಳ ಗ್ರಾಮದ ಹೊರ ಭಾಗದ ಜಮೀನೊಂದರಲ್ಲಿ ಕೋಳಿಗಳ ಕಾಳಗದ ಬೆಟ್ಟಿಂಗ್ ನಡೆಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸುರಪುರ ಪೊಲೀಸರು, 10ಕ್ಕೂ ಹೆಚ್ಚು ಜನರನ್ನ ಕೋಳಿಗಳ ಸಮೇತ ಬಂಧಿಸಿದ್ದಾರೆ.

ಪಿಎಸ್​ಐ ಎಂ.ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಈ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details