ಕರ್ನಾಟಕ

karnataka

ETV Bharat / state

ಭಾನುವಾರದ ಲಾಕ್​ಡೌನ್​ಗೆ ಸುರಪುರ ಜನತೆಯ ಬೆಂಬಲ - latest surpur news

ಶನಿವಾರ ನಗರ ಸಭೆಯ ಸಿಬ್ಬಂದಿ ಪಟ್ಟಣದಾದ್ಯಂತ ಪ್ರಚಾರ ಮಾಡಿ ಸಂಪೂರ್ಣ ಲಾಕ್​ಡೌನ್​ಗೆ ಬೆಂಬಲಿಸುವಂತೆ ಮನವಿ ಮಾಡಿದ್ದರು. ಸದಾ ಜನರಿಂದ ತುಂಬಿರುತ್ತಿದ್ದ ಮಹಾತ್ಮಾ ಗಾಂಧಿ ವೃತ್ತ, ಮಾರುಕಟ್ಟೆ ದರ್ಬಾರ್ ರಸ್ತೆ ಹಾಗೂ ಬಸ್ ನಿಲ್ದಾಣ ಬಿಕೋ ಎನ್ನುತ್ತಿವೆ.

surapur-people-support-to-curfew
ಸುರಪುರ ಕರ್ಫ್ಯೂಗೆ ಸಂಪೂರ್ಣ ಬೆಂಬಲ

By

Published : May 24, 2020, 4:26 PM IST

Updated : May 24, 2020, 4:37 PM IST

ಸುರಪುರ:ಭಾನುವಾರದ ಸಂಪೂರ್ಣ ಲಾಕ್‌ಡೌನ್‌ಗೆ ಪಟ್ಟಣದ ಜನತೆ ಸಂಪೂರ್ಣ ಸಹಕಾರ ನೀಡಿದ್ದಾರೆ.

ಬೆಳಿಗ್ಗೆ 8 ಗಂಟೆಯವರೆಗೆ ಜನರು ಅಗತ್ಯ ವಸ್ತುಗಳ ಖರೀದಿಗೆ ಬಂದಿದ್ದು, ಈ ವೇಳೆಯ ಮಾಂಸ ಖರೀದಿಗೆ ಮುಗಿಬಿದಿದ್ದರು.

ಶನಿವಾರ ನಗರ ಸಭೆಯ ಸಿಬ್ಬಂದಿ ಪಟ್ಟಣದಾದ್ಯಂತ ಪ್ರಚಾರ ಮಾಡಿ ಸಂಪೂರ್ಣ ಲಾಕ್​ಡೌನ್​ಗೆ ಬೆಂಬಲಿಸುವಂತೆ ಮನವಿ ಮಾಡಿದ್ದರು. ಸದಾ ಜನರಿಂದ ತುಂಬಿರುತ್ತಿದ್ದ ಮಹಾತ್ಮಾ ಗಾಂಧಿ ವೃತ್ತ, ಮಾರುಕಟ್ಟೆ ದರ್ಬಾರ್ ರಸ್ತೆ ಹಾಗೂ ಬಸ್ ನಿಲ್ದಾಣ ಬಿಕೋ ಎನ್ನುತ್ತಿವೆ.

ಸುರಪುರು ಜನತೆ ಭಾನುವಾರದ ಕರ್ಫ್ಯೂಗೆ ಬೆಂಬಲ

ಸೋಮವಾರ ರಂಜಾನ್ ಹಬ್ಬ ಇರುವುದರಿಂದ ಮುಸ್ಲಿಂ ಸಮುದಾಯದವರು ಬೆಳಿಗ್ಗೆ ಅಗತ್ಯ ವಸ್ತುಗಳನ್ನು ಖರೀದಿಸಿದರು.

Last Updated : May 24, 2020, 4:37 PM IST

ABOUT THE AUTHOR

...view details