ಕರ್ನಾಟಕ

karnataka

ETV Bharat / state

ಬಿಸಿಲಿನ ತಾಪ ಕಡಿಮೆ ಮಾಡುವ ಮಡಿಕೆಗಳು.. ಹಳ್ಳಿ ಜನರ ಫ್ರಿಡ್ಜ್‌ಗೆ ಫುಲ್‌ ಡಿಮ್ಯಾಂಡ್‌! - undefined

ಯಾದಗಿರಿಯಲ್ಲಿ ಮಿತಿ ಮೀರಿದ ಬಿಸಿಲಿನ ತಾಪದಿಂದಾಗಿ ಜಿಲ್ಲೆಯ ಜನರು ಬಡವರ ಫ್ರಿಡ್ಜ್‌ ಎಂದು ಕರೆಯುವ ಮಣ್ಣಿನ ಮಡಿಕೆಯನ್ನು ಹೆಚ್ಚು ಬಳಸಲಾರಂಭಿಸಿದ್ದಾರೆ.

ಮಣ್ಣಿನ ಮಡಿಕೆಗಳು

By

Published : May 4, 2019, 3:20 PM IST

ಯಾದಗಿರಿ: ಜಿಲ್ಲೆಯಲ್ಲಿ ಬಿಸಿಲಿನ ತಾಪ ತಾಳಲಾರದೆ ಜನರು ಬಡವರ ಫ್ರಿಡ್ಜ್ ಎಂದು ಕರೆಯುವ ಮಣ್ಣಿನ ಮಡಿಕೆಯಲ್ಲಿ ನೀರು ಕುಡಿಯಲು ಪ್ರಾರಂಭಿಸಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 43 ಡಿಗ್ರಿ ಸೆಲ್ಸಿಯಸ್‌ನಿಂದ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರುತ್ತದೆ. ಮನೆಯಲ್ಲಿ ಫ್ರಿಡ್ಜ್‌​, ರೆಫ್ರಿಜಿರೇಟರ್ ಬಳಕೆ ಮಾಡುತ್ತಿದ್ದರೂ ಕೂಡ ಮಣ್ಣಿನ ಗಡಿಗೆಯ ನೀರು ಕುಡಿಯಲು ಯೋಗ್ಯ ಎಂದು ಮಡಿಕೆಯನ್ನು ಉಪಯೋಗಿಸುತ್ತಿದ್ದಾರೆ.

ಮಣ್ಣಿನ ಮಡಿಕೆಗಳ ವ್ಯಾಪಾರ

ಬೇಸಿಗೆಯ ಕಾಲದಲ್ಲಿ ಮಾತ್ರ ಮಣ್ಣಿನ ಮಡಿಕೆಗಳು ಮಾರಾಟವಾಗುತ್ತವೆ. ಉಳಿದ ದಿನಗಳಲ್ಲಿ ವ್ಯಾಪಾರವಿಲ್ಲದೆ ನೊಣ ಹೊಡೆಯುವ ಪರಿಸ್ಥಿತಿ ಇರುತ್ತದೆ. ಬೇಸಿಗೆಯ ದಿನಗಳಲ್ಲಿ ಮಾತ್ರ ನಾಲ್ಕು ಕಾಸು ದುಡ್ಡು ಸಂಪಾದಿಸಬಹುದು ಅಂತಾ ಹೇಳ್ತಾರೆ ಮಡಿಕೆ ಮಾರಾಟಗಾರರು.

ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತಿತರ ಕಡೆಗಳಿಂದಲೂ ಮಣ್ಣಿನ ಮಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತದೆ.

For All Latest Updates

TAGGED:

ABOUT THE AUTHOR

...view details