ಯಾದಗಿರಿ: ಕೇಂದ್ರ ಸರ್ಕಾರವೇ ರೈತರ ವಿರೋಧಿಯಾಗಿರುವಾಗ ಇನ್ನು ಬಜೆಟ್ ರೈತ ಸ್ನೇಹಿಯಾಗಲು ಹೇಗೆ ಸಾಧ್ಯ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಸುಭಾಷ್ ಐಕೂರ ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕೃಷಿ ತಿದ್ದುಪಡಿ ಕಾಯ್ದೆಗಳಿಂದ ರೈತರಿಗೆ ತೊಂದರೆಯಾಗುತ್ತದೆ. ಕಳೆದ ಅನೇಕ ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ, ಸರ್ಕಾರ ಮಾತ್ರ ಅವರೊಂದಿಗೆ ಮಾತನಾಡಿಲ್ಲ. ಬದಲಿಗೆ ಬೀದಿಗಿಳಿದ ರೈತನ ಮೇಲೆಯೇ ಸರ್ಕಾರ ಗುಂಡು ಹಾರಿಸುತ್ತಿದೆ. ಮೊದಲು ಕೃಷಿ ಕಾಯ್ದೆಯನ್ನು ವಾಪಸ್ ಪಡೆಯಬೇಕು. ಅದನ್ನು ಬಿಟ್ಟು ರೈತನ ಧರಣಿಗೆ ಕ್ಯಾರೆ ಎನ್ನದೇ ಇದೀಗ ಬಜೆಟ್ ನಲ್ಲಿ ರೈತರ ಅಭಿವೃದ್ಧಿಗೆಂದು ಹಣ ಮೀಸಲಿಡುವುದು ಒಂದು ಕೈಯಲ್ಲಿ ಮಗುವನ್ನು ಚಿವುಟಿ ಇನ್ನೊಂದು ಕೈಯಲ್ಲಿ ತೊಟ್ಟಿಲು ತೂಗಿದಂತೆ ಎಂದರು.