ನವದೆಹಲಿ/ಯಾದಗಿರಿ :ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ, ಪಂಜಾಬ್ ಹಾಗೂ ಹರಿಯಾಣ ರೈತರು ದೆಹಲಿ ಚಲೋ ಕೈಗೊಂಡಿದ್ದಾರೆ. ದೆಹಲಿ ಗಡಿಯಲ್ಲೇ ತಮ್ಮ ಹೋರಾಟವನ್ನು ಮುಂದುವರೆಸಿದ್ದು, ಈ ಪ್ರತಿಭಟನೆ ಇಂದಿಗೆ ಮೂರನೇ ದಿನಕ್ಕೆ ಕಾಲಿಟ್ಟಿದೆ.
ದೆಹಲಿಯಲ್ಲಿ ಮೊಳಗಿದ ಅನ್ನದಾತರ ಕಹಳೆ.. ಪ್ರತಿಭಟನೆಗೆ ರೈತ ಮುಖಂಡ ಸುಭಾಷ್ ಐಕೂರು ಸಾಥ್
ದೆಹಲಿಯ ಹೊರವಲಯದಲ್ಲಿರುವ ಬುರಾರಿ ಮೈದಾನದಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದ್ದು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಸುಭಾಷ್ ಐಕೂರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ದೆಹಲಿಯ ಹೊರವಲಯದಲ್ಲಿರುವ ಬುರಾರಿ ಮೈದಾನದಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದೆ. ಕರ್ನಾಟಕದ ಯಾದಗಿರಿಯಿಂದಲೂ ಪ್ರತಿಭಟನೆಗೆ ಸಾಥ್ ನೀಡಲಾಗಿದೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಸುಭಾಷ್ ಐಕೂರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಅವರು ತಮ್ಮ ಬೆಂಬಲಿಗರ ಜೊತೆಯಲ್ಲಿ ಕಳೆದೆರಡು ದಿನಗಳಿಂದ ದೆಹಲಿಯಲ್ಲಿದ್ದು, ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.
ಸುಭಾಷ್ ಐಕೂರು ಜೊತೆಯಲ್ಲಿ ಆಮ್ ಆದ್ಮಿ ಪಕ್ಷದ ವಕ್ತಾರ ಹಾಗೂ ಶಾಸಕ ರಾಘವ್ ಚಡ್ಡಾ ಕೂಡ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಪಂಜಾಬ್, ಹರಿಯಾಣ ಸೇರಿದಂತೆ ದೇಶದ ನಾನಾ ಭಾಗದ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಅನ್ನದಾತನ ಕಹಳೆ ರಾಷ್ಟ್ರ ರಾಜಧಾನಿಯಲ್ಲಿ ಮೊಳಗಿದೆ.