ಯಾದಗಿರಿ: ಸೂಕ್ತ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ಲಿಂಗೇರಿ ಸ್ಟೇಷನ್ ಸರ್ಕಾರಿ ಶಾಲೆಗೆ ತೆರಳಲು ಶೆಟ್ಟಿಗೇರಾ, ಕೋಳೂರು, ಮುಷ್ಟೂರು, ನಾಗರಬಂಡೆ, ಮಾಲಾರ ತಾಂಡಾ, ಜಿಂಕೇರಾ, ಎಂ. ಹೊಸಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ನಿತ್ಯ ಪರದಾಡುವಂತಾಗಿದೆ. ಈ ಕುರಿತು ಸಾರಿಗೆ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ಶಾಲಾ ಮಕ್ಕಳು ನಿತ್ಯ ಹೊಲ, ಗದ್ದೆಗಳ ಮಧ್ಯದಿಂದ ಕಾಲುದಾರಿಯಲ್ಲಿ ನಾಲ್ಕೈದು ಕಿಲೋಮೀಟರ್ ನಡೆದುಕೊಂಡು ಶಾಲೆಗೆ ಹೋಗುತ್ತಾರೆ. ಈ ಭಾಗದಲ್ಲಿ ಸರ್ಕಾರಿ ಬಸ್‌ಗಳು ಬರೋದೇ ಕಡಿಮೆ. ಯಾವಾಗಲಾದರೂ ಒಂದು ಸಲ ಬಸ್ ಬಂದು ಹೋಗುತ್ತದೆ. ಅದು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಹಾಗಾಗಿ ಇಲ್ಲಿನ ಜನ ಸಂಚಾರಕ್ಕಾಗಿ ಅಟೋಗಳನ್ನೇ ಅವಲಂಬಿಸಿದ್ದಾರೆ.