ಸುರಪುರ/ಯಾದಗಿರಿ:ಟ್ರ್ಯಾಕ್ಟರ್ ಪಲ್ಟಿಯಾಗಿ ಪರೀಕ್ಷಾ ಪ್ರವೇಶ ಪತ್ರ ತರಲು ಹೊರಟಿದ್ದ ವಿದ್ಯಾರ್ಥಿ ಮೃತಪಟ್ಟಿರೋ ಘಟನೆ ಸುರಪುರ ತಾಲೂಕಿನ ಚಿಕ್ಕನಹಳ್ಳಿ ಬಳಿಯ ಬಾಚಿಮಟ್ಟಿ ರಸ್ತೆಯಲ್ಲಿ ನಡೆದಿದೆ.
ಮಂಗಳವಾರ ಬೆಳಗ್ಗೆ ಚಿಕ್ಕನಹಳ್ಳಿ ಗ್ರಾಮದಿಂದ ಬಾಚಿಮಟ್ಟಿ ಗ್ರಾಮದಲ್ಲಿರೋ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆಯಲು 10ನೇ ತರಗತಿಯ ಪರೀಕ್ಷೆ ಪ್ರವೇಶ ಪತ್ರ ತರಲು ಮಂಜುನಾಥ (16 ವರ್ಷ) ಹೊರಟಿದ್ದ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾದ ಶಾಲೆಯ ಬಳಿ ಬಿಡುವುದಾಗಿ ಟ್ರ್ಯಾಕ್ಟರ್ ಚಾಲಕ ಈತನನ್ನು ಹತ್ತಿಸಿಕೊಂಡು ಹೋಗಿದ್ದಾನೆ.