ಯಾದಗಿರಿ:ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ ಅವರು ವಿದ್ಯಾರ್ಥಿನಿಯೋರ್ವಳನ್ನು ಅತಿಥಿ ಸಿಇಒ ಆಗಿ ತಮ್ಮ ಕುರ್ಚಿಯಲ್ಲಿ ಕೂರಿಸಿ, ಸತ್ಕರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ವಿದ್ಯಾರ್ಥಿನಿಗೆ ತಮ್ಮ ಕುರ್ಚಿ ಮೇಲೆ ಕೂರಿಸಿ ಪ್ರೇರೇಪಿಸಿದ ಸಿಇಒ!
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ ಅವರು ವಿದ್ಯಾರ್ಥಿನಿಯೋರ್ವಳನ್ನು ಅತಿಥಿ ಸಿಇಒ ಆಗಿ ತಮ್ಮ ಕುರ್ಚಿಯಲ್ಲಿ ಕೂರಿಸಿ ಸತ್ಕರಿಸಿದರು.
ಯಾದಗಿರಿ ಸಿಇಒ ಶಿಲ್ಪಾ ಶರ್ಮ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಗತಿ ಎಂಬುವಳನ್ನು ಅತಿಥಿ ಸಿಇಒ ಸ್ಥಾನದಲ್ಲಿ ಕೂರಿಸಿ, ವಿದ್ಯಾರ್ಥಿನಿಯ ಐಎಎಸ್ ಕನಸಿಗೆ ಪ್ರೇರಣೆ ನೀಡಿದ್ದಾರೆ. ಅತಿಥಿ ಸಿಇಒ ಸ್ಥಾನ ಅಲಂಕರಿಸಿ ಮಾತನಾಡಿದ ಪ್ರಗತಿ, ಈ ಕುರ್ಚಿಯಲ್ಲಿ ಕುಳಿತಿದ್ದು ತುಂಬಾ ಸಂತಸ ತಂದಿದೆ. ಅಲ್ಲದೇ ನನ್ನ ಗುರಿಯನ್ನು ತಲುಪುವುದಕ್ಕೆ ಪ್ರೇರಣೆ ನೀಡಿದೆ. ಭವಿಷ್ಯದಲ್ಲಿ ಸಿಇಒ ಹುದ್ದೆಗೇರಿದರೆ, ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಹೇಳಿದಳು.
ಇದೇ ವೇಳೆ ಮಾತನಾಡಿದ ಸಿಇಒ ಶಿಲ್ಪಾ ಶರ್ಮಾ, ಪ್ರಸ್ತುತ ಹೆಣ್ಣು ಮಕ್ಕಳೂ ಸಾಕಷ್ಟು ರಂಗಗಳಲ್ಲಿ ಮುಂದುವರೆದಿದ್ದಾರೆ. ಪುರುಷರಷ್ಟೇ ಸಮಾನ ಅವಕಾಶಗಳು ದೊರೆಯುತ್ತಿದ್ದು, ಉತ್ತಮ ಸಮಾಜ ನಿರ್ಮಾಣದಲ್ಲಿ ಹೆಣ್ಣು ಮಕ್ಕಳ ಪಾತ್ರವೂ ಸಾಕಷ್ಟಿದೆ ಎಂದರು.