ಕರ್ನಾಟಕ

karnataka

ETV Bharat / state

ಕೊರೊನಾದಿಂದ ಸ್ಟಾಫ್ ನರ್ಸ್ ಗುಣಮುಖ.. ಹೂಗುಚ್ಛ ನೀಡಿ ಅಭಿನಂದಿಸಿದ ಸಚಿವ ಚೌಹಾಣ್ - ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್

ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಹಾಗೂ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಅವರು ಗುಣಮುಖರಾದ ಸ್ಟಾಫ್‌ ನರ್ಸ್‌ಗೆ ಹೂಗುಚ್ಛ ನೀಡಿ ಮನೆಗೆ ಕಳುಹಿಸಿದ್ರು.

Staff Nurse Healed from Corona at Yadagiri
ಕೊರೊನಾದಿಂದ ಸ್ಟಾಫ್ ನರ್ಸ್ ಗುಣಮುಖ

By

Published : Jun 12, 2020, 8:51 PM IST

ಯಾದಗಿರಿ :ಕೊರೊನಾ ಪಾಸಿಟಿವ್ ತಗುಲಿದ್ದ ಸ್ಟಾಫ್ ನರ್ಸ್‌ವೊಬ್ಬರು ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇಂದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಜಿಲ್ಲೆಯ ನೂತನ ಜಿಲ್ಲಾಸ್ಪತ್ರೆಯ ಕೋವಿಡ್-19 ವಾರ್ಡ್​​​ನಿಂದ 24 ವರ್ಷದ (ಪಿ-5062) ಸ್ಟಾಫ್‌ನರ್ಸ್ ಇಂದು ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ.

ಜಿಲ್ಲೆಯ ವಡಗೇರಾ ತಾಲೂಕಿನ ಬೆಂಡೆಬೆಂಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ನಿರ್ವಹಿಸುತ್ತಿದ್ದ ವ್ಯಕ್ತಿಗೆ 8 ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿತ್ತು. ಅವರನ್ನ ಚಿಕಿತ್ಸೆಗಾಗಿ ಜಿಲ್ಲೆಯ ನೂತನ ಜಿಲ್ಲಾಸ್ಪತ್ರೆಯ ಕೋವಿಡ್-19 ವಾರ್ಡ್​​​ಗೆ ದಾಖಲಿಸಲಾಗಿತ್ತು. ಇದೀಗ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕೊರೊನಾದಿಂದ ಸ್ಟಾಫ್‌ನರ್ಸ್ ಗುಣಮುಖ..

ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಹಾಗೂ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಅವರು ಗುಣಮುಖರಾದ ಸ್ಟಾಫ್‌ ನರ್ಸ್‌ಗೆ ಹೂಗುಚ್ಛ ನೀಡಿ ಮನೆಗೆ ಕಳುಹಿಸಿದ್ರು. ಇನ್ನು ಕಳೆದ 8 ದಿನಗಳಿಂದ ನಿರಂತರವಾಗಿ ಚಿಕಿತ್ಸೆ ನೀಡುತ್ತಾ ನಿಗಾವಹಿಸಿದ ಜಿಲ್ಲಾ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದಗಳು ಸಲ್ಲಿಸಿ ಸ್ಟಾಫ್ ನರ್ಸ್​​​ ಮನೆಗೆ ತೆರಳಿದ್ರು.

ABOUT THE AUTHOR

...view details