ಯಾದಗಿರಿ: ರಾಮುಲು ಡಿಸಿಎಂ ಆಗಬೇಕೆನ್ನುವುದು ಜನರ ಅಭಿಪ್ರಾಯ. ನಾನದನ್ನು ತಿರಸ್ಕರಿಸುವುದಿಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮಲು ಪರೋಕ್ಷವಾಗಿ ತಾವೂ ಕೂಡ ಡಿಸಿಎಂ ಸ್ಥಾನದ ಆಕಾಂಕ್ಷಿ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ.
ಖಾಸಗಿ ಕಾರ್ಯಕ್ರಮದ ನಿಮಿತ್ತ ಅವರು ಶಹಪುರ ನಗರಕ್ಕೆ ಆಗಮಿಸಿದ್ದರು. ವೇಳೆ ಈ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನನಗೆ ಡಿಸಿಎಂ ಸ್ಥಾನ ನೀಡಬೇಕು ಎನ್ನುವುದು ಜನರ ಅಪೇಕ್ಷೆಯಾಗಿದೆ. ಜನರ ಮಾತನ್ನು ಸರ್ಕಾರ ಕೇಳುತ್ತದೆ ಎಂಬ ನಂಬಿಕೆಯೂ ಇದೆ. ಸೂಕ್ತ ಸಮಯದಲ್ಲಿ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ಡಿಸಿಎಂ ಸ್ಥಾನ ನೀಡದಿದ್ರೆ ಮುಂದೆ ನೋಡೋಣ ಎಂದರು.