ಯಾದಗಿರಿ : ಕೆಪಿಸಿಸಿ ಅಧ್ಯಕ್ಷ ಪಟ್ಟ ಯಾರಿಗೆ ಎನ್ನುವ ಬಗೆಗಿನ ಗೊಂದಲಗಳು ಬಹುತೇಕ ನಿವಾರಣೆಯಾಗಿದೆ ಎಂದೇ ಹೇಳಲಾಗುತ್ತಿದೆ. ಈ ಹುದ್ದೆ ಡಿ.ಕೆ.ಶಿವಕುಮಾರ್ ಅವರಿಗೆ ಸಿಗಲಿದೆ ಎಂದೇ ಜೋರಾಗಿ ಚರ್ಚೆಯಾಗುತ್ತಿದೆ. ಈ ಮಧ್ಯೆ ಡಿಕೆಶಿ ಗೋನಾಲ ಗ್ರಾಮದಲ್ಲಿ ಗಡೆ ದುರ್ಗಾದೇವಿ ಮೊರೆ ಹೋಗಿದ್ದಾರೆ.
ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಲ ಗ್ರಾಮದಲ್ಲಿ ಗಡೆ ದುರ್ಗಾಮಾತೆಯ ಪರಮಭಕ್ತರಾಗಿರುವ ಕಾಂಗ್ರೆಸ್ ನಾಯಕ ತಮ್ಮ ಸಂಕಷ್ಟ ದಿನಗಳಲ್ಲಿ ದೇವಿಯ ಆರಾಧನೆ ಮಾಡುತ್ತಾರೆ ಅಂತ ದೇವಸ್ಥಾನದ ಅರ್ಚಕ ಮಹಾದೇವ ಪೂಜಾರಿ ಈ ಹಿಂದೆ ತಿಳಿಸಿದ್ದರು. ಅಲ್ಲದೇ ಈ ಹಿಂದೆ 'ಆಲ್ ಕೇಸ್ ಡಿಲಿಟ್ ಮಾಡಮ್ಮಾ..' ಅಂತ ಪತ್ರ ಬರೆದು ದೇವಿಯ ಸನ್ನಿಧಿಯಲ್ಲಿ ಇಟ್ಟು ಕಳೆದ 2 ತಿಂಗಳ ಹಿಂದಷ್ಟೇ ಇಲ್ಲಿ ವಿಶೇಷ ಪೂಜೆ ಮಾಡಿಸಿದ್ದರಂತೆ.