ಕಲಬುರಗಿ: ಮೊಮ್ಮಗನ ಸಾವಿನ ಸುದ್ದಿಯ ಆಘಾತದಿಂದ ಅಜ್ಜನೂ ಸಾವನ್ನಪ್ಪಿರುವ ಮನಕಲಕುವ ಘಟನೆ ಯಡ್ರಾಮಿ ತಾಲೂಕಿನ ಬಿರಾಳ ಗ್ರಾಮದಲ್ಲಿ ನಡೆದಿದೆ.
ಮೊಮ್ಮಗನ ಸಾವಿನ ಸುದ್ದಿ ಕೇಳಿ ಅಜ್ಜ ಸಾವು: ಯಡ್ರಾಮಿಯಲ್ಲಿ ಮನಕಲಕುವ ಘಟನೆ - yadgir latest sucide news
ಕಲಬುರಗಿಯ ಯಡ್ರಾಮಿ ತಾಲೂಕಿನ ಬಿರಾಳ ಗ್ರಾಮದಲ್ಲಿ ಮೊಮ್ಮಗನ ಸಾವಿನ ಸುದ್ದಿ ತಿಳಿದ ಅಜ್ಜ ಅಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಜಟ್ಟಪ್ಪ ಏವೂರ (69) ಮೊಮ್ಮಗನ ಸಾವಿನ ವಿಷಯ ಅರಗಿಸಿಕೊಳ್ಳಲಾಗದೆ ಮೃತಪಟ್ಟ ಅಜ್ಜ. ನಿನ್ನೆ ರಾತ್ರಿ ಮೊಮ್ಮಗ ದೇವೇಂದ್ರ ಏವೂರ(24) ಹೊಟ್ಟೆನೋವು ತಾಳಲಾರದೆ ಹೊಲದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ವಿಷಯ ಅರಿತ ಅಜ್ಜ ಜಟ್ಟಪ್ಪ ಕೂಡಾ ಆಘಾತದಿಂದ ಸಾವನ್ನಪ್ಪಿದ್ದಾರೆ.
ಟ್ರ್ಯಾಕ್ಟರ್ ಚಾಲಕನಾಗಿದ್ದ ದೇವೀಂದ್ರ ಕುಟುಂಬದ ನಿರ್ವಹಣೆ ನೋಡಿಕೊಳ್ಳುತ್ತಿದ್ದ. ರಾತ್ರಿ ಮೊಮ್ಮಗನ ಸಾವು, ಬೆಳಗಾಗುವಷ್ಟರಲ್ಲಿ ಅಜ್ಜನ ಸಾವು ಇಡೀ ಗ್ರಾಮವನ್ನೇ ಶೋಕ ಸಾಗರಲ್ಲಿ ಮುಳುಗುವಂತೆ ಮಾಡಿದೆ. ದೇವಿಂದ್ರ ಏವೂರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.