ಯಾದಗಿರಿ:ಜಿಲ್ಲೆಯ ಶಹಪುರದ ಮತ ಎಣಿಕೆ ಕೇಂದ್ರಕ್ಕೆ ಚಾಕು ಹಾಗೂ ಪಂಚ್ ತಂದಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಮತ ಎಣಿಕೆ ಕೇಂದ್ರಕ್ಕೆ ಚಾಕು, ಪಂಚ್ ತಂದಿದ್ದ ಅಭ್ಯರ್ಥಿಯ ಪುತ್ರನ ಬಂಧನ - Shahpur Police Station
ಮತ ಎಣಿಕೆ ಕೇಂದ್ರಕ್ಕೆ ಚಾಕು ಹಾಗೂ ಪಂಚ್ ತಂದಿದ್ದ ವ್ಯಕ್ತಿಯನ್ನು ಯಾದಗಿರಿ ಜಿಲ್ಲೆಯ ಶಹಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮತ ಎಣಿಕೆ ಕೇಂದ್ರಕ್ಕೆ ಚಾಕು,ಪಂಚ್ ತಂದ ಅಭ್ಯರ್ಥಿಯ ಮಗ
ಮಹಮದ್ ಅಶ್ಫಕ್ (39) ಬಂಧಿತ. ಅಶ್ಫಕ್ ಶಹಪುರ ತಾಲೂಕಿನ ಸಗರ ಗ್ರಾಮದ ವ್ಯಕ್ತಿ ಎಂದು ತಿಳಿದು ಬಂದಿದ್ದು, ತನ್ನ ತಂದೆ ಅಹಮದ್ ಶಫಿ ಪರವಾಗಿ ಮತ ಎಣಿಕೆ ಕೇಂದ್ರಕ್ಕೆ ಬಂದಿದ್ದ.
ತಪಾಸಣೆ ವೇಳೆ ಚಾಕು ಮತ್ತು ಪಂಚ್ ಪತ್ತೆಯಾಗಿದ್ದು, ಅಶ್ಫಕ್ ಮೇಲೆ FRI ದಾಖಲಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.