ಯಾದಗಿರಿ: ಪ್ರವಾಹ ನಿರ್ವಾಹಣೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಚಿವ ಪ್ರಭು ಚವ್ಹಾಣ ಹಾಗೂ ಕಾಂಗ್ರೆಸ್ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ನಡುವೆ ವಾಗ್ವಾದ ನಡೆಯಿತು.
ಜಿಲ್ಲಾ ಮ್ಯಾಪ್ನಿಂದ ಶಹಪುರ ಕ್ಷೇತ್ರ ತೆಗೆದುಹಾಕಿ: ಸಚಿವರ ವಿರುದ್ಧ ಶರಣಬಸಪ್ಪಗೌಡ ದರ್ಶನಾಪುರ ಆಕ್ರೋಶ
ನೆರೆ ನಿರ್ವಹಣೆಗೆ ಶಹಪುರ ಕ್ಷೇತ್ರಕ್ಕೆ ಮಾತ್ರ ಪರಿಹಾರಧನ ನೀಡಿಲ್ಲ, ಜಿಲ್ಲಾ ಮ್ಯಾಪ್ ನಿಂದ ಶಹಪುರ ಕ್ಷೇತ್ರ ತೆಗೆದು ಹಾಕಿ ಎಂದು ಸಚಿವ ಪ್ರಭು ಚೌವ್ಹಾಣ ವಿರುದ್ಧ ಕಾಂಗ್ರೆಸ್ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ನೇತ್ರತ್ವದಲ್ಲಿ ಪ್ರವಾಹ ನಿರ್ವಹಣೆ ಪ್ರಗತಿ ಪರಿಶೀಲನೆ ಸಭೆ ನಡೆಸಲಾಯಿತು. ಜಿಲ್ಲೆಯಲ್ಲಿ ಸಂಭವಿಸಿದ ನೆರೆ ನಿರ್ವಹಣೆಗೆ ಸರ್ಕಾರ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಶಹಪುರ ಕ್ಷೇತ್ರಕ್ಕೆ ಮಾತ್ರ ಪರಿಹಾರಧನ ನೀಡಿಲ್ಲ ಅಂತ ಸಭೆಯಲ್ಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಸಚಿವರನ್ನು ತರಾಟೆಗೆ ತೆಗೆದುಕೊಂಡರು. ಶಹಪುರ ಕ್ಷೇತ್ರಕ್ಕೆ ಅನುದಾನ ನೀಡದೆ ನಮ್ಮ ಕ್ಷೇತ್ರಕ್ಕೆ ವಿಷ ಹಾಕಿದ್ದೀರಿ, ನಮ್ಮ ಕ್ಷೇತ್ರಕ್ಕೆ ಸಚಿವರಾದ ನೀವು ಅನ್ಯಾಯ ಮಾಡಿದ್ದಿರಿ ಅಂತ ಅಸಮಾಧಾನ ವ್ಯಕ್ತಪಡಿಸಿದರು.
ಅನುಧಾನ ನೀಡದಿದ್ದಕ್ಕೆ ಕ್ಷೇತ್ರದ ಜನರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಎನ್ನುತ್ತಿದ್ದಾರೆ. ಜಿಲ್ಲಾ ಮ್ಯಾಪ್ ನಿಂದ ಶಹಪುರ ಕ್ಷೇತ್ರ ತೆಗೆದು ಹಾಕಿ ಅಂತ ಸಭೆಯಲ್ಲಿ ಸಚಿವ ಪ್ರಭು ಚವ್ಹಾಣ ವಿರುದ್ಧ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.