ಕರ್ನಾಟಕ

karnataka

ETV Bharat / state

ಕೊರೊನಾ ಕಂಟಕ: ಶರಣಬಸವೇಶ್ವರ ಜಾತ್ರಾ ಮಹೋತ್ಸವ ರದ್ದು

ಜಿಲ್ಲೆಯ ಸುರಪುರ ತಾಲೂಕಿನ ನಗನೂರ ಗ್ರಾಮದ ಆರಾಧ್ಯ ದೈವ ಶರಣಬಸವೇಶ್ವರ ಜಾತ್ರೆ ಇಂದು ನಡೆಯಬೇಕಿತ್ತು. ಆದರೆ, ಕೊರೊನಾ ಹಿನ್ನೆಲೆ ಜಾತ್ರಾ ಮಹೋತ್ಸವ ರದ್ದಾಗಿದೆ.

jatre
jatre

By

Published : Apr 17, 2020, 12:51 PM IST

ಯಾದಗಿರಿ:ಕರೊನಾ ಭೀತಿ ಹಿನ್ನೆಲೆ ಇಂದು ನಡೆಯಬೇಕಿದ್ದ ಶರಣಬಸವೇಶ್ವರ ಜಾತ್ರಾ ಮಹೋತ್ಸವ ರದ್ದುಗೊಳಿಸಲಾಗಿದ್ದು, ಕೊರೊನಾ ಭೀತಿ ಬಿಸಿ ಜಾತ್ರೆಗೂ ತಟ್ಟಿದಂತಾಗಿದೆ.

ಜಿಲ್ಲೆಯ ಸುರಪುರ ತಾಲೂಕಿನ ನಗನೂರ ಗ್ರಾಮದ ಆರಾಧ್ಯ ದೈವ ಶರಣಬಸವೇಶ್ವರ ಜಾತ್ರೆ ಇಂದು ನಡೆಯಬೇಕಿತ್ತು. ಆದರೆ, ಡೆಡ್ಲಿ ಕೊರೊನಾ ಮುಂಜಾಗ್ರತಾ ಕ್ರಮವಾಗಿ ನಗನೂರ ಗ್ರಾಮದ ಶರಣಬಸವೇಶ್ವರ ಮಂದಿರದ ಆವರಣದಲ್ಲಿ ಬೀಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಶರಣಬಸವೇಶ್ವರ ಜಾತ್ರಾ ಮಹೋತ್ಸವ ರದ್ದು

ಶರಣಬಸವೇಶ್ವರ ದೇವರ ದರ್ಶನ‌ ಪಡೆಯಲು ಬರುವ ಭಕ್ತರನ್ನು ದರ್ಶನಕ್ಕೆ ಅವಕಾಶ ಮಾಡಿಕೊಡದೇ ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ.

ಶರಣಬಸವೇಶ್ವರ ಜಾತ್ರೆ ರದ್ದು

ಗ್ರಾಮದಲ್ಲಿ ವ್ಯಾಪಾಕ ಪೊಲೀಸ್ ಬಿಗಿ ಬಂದೊಬಸ್ತ ಒದಗಿಸಲಾಗಿದ್ದು, ದೇವಸ್ಥಾನದ ಹತ್ತಿರ ಯಾರೂ ಸುಳಿಯದಂತೆ ಪೊಲೀಸರು ಸರ್ಪಗಾವಲು ಹಾಕಿದ್ದಾರೆ.

ABOUT THE AUTHOR

...view details