ಕರ್ನಾಟಕ

karnataka

ETV Bharat / state

ಶಹಾಪುರ ನಗರಸಭೆ ಚುನಾವಣೆ.. ಈ ಬಾರಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾ ಕಾಂಗ್ರೆಸ್​​​..? - undefined

ಇನ್ನೇನು ಲೋಕಸಭಾ ಚುನಾವಣೆ ಪ್ರಕ್ರಿಯೆ ಮುಗಿತು ಎಂದು ನಿಟ್ಟುಸಿರು ಬಿಡುವ ಸಮಯದಲ್ಲಿಯೇ ಯಾದಗಿರಿ ಜಿಲ್ಲೆಯ ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಗರಸಭೆ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿವೆ‌‌. ಶಹಾಪುರ ನಗರಸಭಾ ಚುನಾವಣೆಯಲ್ಲಿ 31 ವಾರ್ಡಗಳಿಗೆ ನಗರಸಭೆ ಸದಸ್ಯರು ಆಯ್ಕೆಯಾಗಲಿದ್ದಾರೆ. ಒಟ್ಟಾರೆ 31 ವಾರ್ಡಗಳಿಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ಅಧಿಕಾರ ಹಿಡಿಯಲು ರಣತಂತ್ರ ರೂಪಿಸುತ್ತಿವೆ.

ಶಹಾಪುರ ನಗರಸಭೆ ಚುನಾವಣೆ

By

Published : May 26, 2019, 11:38 AM IST

ಯಾದಗಿರಿ :ಲೋಕಸಭಾ ಚುನಾವಣೆ ಪ್ರಕ್ರಿಯೆ ಮುಗಿತು ಎಂದು ನಿಟ್ಟುಸಿರು ಬಿಡುವ ಸಮಯದಲ್ಲಿಯೇ ಯಾದಗಿರಿ ಜಿಲ್ಲೆಯ ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಗರಸಭೆ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿದೆ.

ಶಹಾಪುರ ನಗರಸಭೆ ಚುನಾವಣೆ

ಶಹಾಪುರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟಿ. ಈ ವಿಧಾನಸಭಾ ಕ್ಷೇತ್ರದ ಶಾಸಕ ಶರಣಬಸಪ್ಪ ದರ್ಶನಾಪುರ ಕಾಂಗ್ರೆಸ್ಸಿನ ಹಿರಿಯ ಮುಖಂಡರು. ಈ ಕ್ಷೇತ್ರದಲ್ಲಿ ಅವರು​​ ಅತ್ಯಂತ ಪ್ರಭಾವ ಹೊಂದಿದ್ದಾರೆ. ಹೀಗಾಗಿ ಈ ಶಹಾಪುರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಜಯಭೇರಿ ಬಾರಿಸುವ ಸಾಧ್ಯತೆ ಹೆಚ್ಚಿದೆ. ಶಹಾಪುರ ನಗರಸಭೆಯ ಎಲ್ಲಾ ವಾರ್ಡ್‌ಗಳಿಗೆ ಹಾಗೂ ಸುತ್ತಮುತ್ತ ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸಲಾಗಿದೆ. ಕುಡಿಯುವ ನೀರು, ರಸ್ತೆ, ಒಳಚರಂಡಿ, ಶಿಕ್ಷಣ ಹೀಗೆ ಎಲ್ಲಾ ರೀತಿಯ ಸೌಲಭ್ಯಗಳನ್ನ ಕಲ್ಪಿಸಿರುವುದರಿಂದ ಮತ್ತೆ ಈ ಬಾರಿಯೂ ಕಾಂಗ್ರೆಸ್ ಪಕ್ಷಕ್ಕೆ ನಗರಸಭೆಯ ಅಧಿಕಾರ ಗದ್ದುಗೆ ಸಿಗಲಿದೆ ಎಂದು ಶಾಸಕ ದರ್ಶನಾಪುರ ಭವಿಷ್ಯ ನುಡಿದರು.

ಕಳೆದ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ ಪಕ್ಷಕ್ಕೆ ಅಧಿಕಾರ ದೊರಕಿದ ಸಮಯದಲ್ಲಿ ಎಲ್ಲಾ ವಾರ್ಡಗಳಲ್ಲಿ, ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಕಾಂಗ್ರೆಸ್​ ನಾಯಕರಿಗೆ ಜನರು ಆಶೀರ್ವಾದ ಮಾಡಲಿದ್ದಾರೆ ‌ಎಂದರು. ಬಿಜೆಪಿ ಪಕ್ಷವು ಯಾವುದೇ ರೀತಿಯ ಕೆಲಸ ಮಾಡದೆ ವಾಮಮಾರ್ಗದಲ್ಲಿ ಅಧಿಕಾರ ಪಡೆಯಲು ಚಿಂತಿಸುತ್ತುದೆ ಎಂದು ಪರೋಕ್ಷವಾಗಿ ಮಾಜಿ ಶಾಸಕ ಗುರುಪಾಟೀಲ್​ ಶೀರವಾಲ್​ ಅವರಿ​ಗೆ ಟಾಂಗ್​ ಕೊಟ್ಟರು.

For All Latest Updates

TAGGED:

ABOUT THE AUTHOR

...view details