ಕರ್ನಾಟಕ

karnataka

ETV Bharat / state

ಮಹಿಳೆ ಹೊತ್ತೊಯ್ದು ಅತ್ಯಾಚಾರ: ಅಟ್ಟಹಾಸ ಮೆರೆದಿದ್ದ ಕಾಮುಕರ ಬಂಧನ..! - ಯಾದಗಿರಿ ಶಾಹಾಪುರ ಗ್ಯಾಂಗ್​ ರೇಪ್​ ಕೇಸ್​​

ದೇವರ ದರ್ಶನ ಪಡೆದು ಸಂಬಂಧಿಯ ಜೊತೆ ಮನೆಯತ್ತ ಹೋಗುತ್ತಿದ್ದ ಮಹಿಳೆಯ ಮೇಲೆ ಮದ್ಯದ ಅಮಲಿನಲ್ಲಿದ್ದ ಇಬ್ಬರು ಕಾಮುಕರು ಅತ್ಯಾಚಾರ ಎಸಗಿರುವ ಘಟನೆ ಸುರಪುರ ತಾಲೂಕಿನಲ್ಲಿ ನಡೆದಿದೆ. ಮಹಿಳೆ ಸಂಬಂಧಿ ಮೇಲೆ ಹಲ್ಲೆ ನಡೆಸಿ ಈ ಕೃತ್ಯ ಎಸಗಿದ್ದಾಗಿ ತಿಳಿದು ಬಂದಿದೆ.

Shahapur rape accused arrest
ಅತ್ಯಾಚಾರ ಪ್ರಕರಣ

By

Published : Aug 10, 2021, 10:26 PM IST

ಸುರಪುರ: ದೇವಸ್ಥಾನಕ್ಕೆ ತೆರಳಿ ಮರಳಿ ಮನೆಯತ್ತ ಹೋಗುತ್ತಿದ್ದ ಮಹಿಳೆಯನ್ನು ಹೊತ್ತೊಯ್ದ ಇಬ್ಬರು ಅಪರಿಚಿತರು ಅತ್ಯಾಚಾರ ಎಸಗಿರುವ ದಾರುಣ ಘಟನೆ ಶಹಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆಗಸ್ಟ್ 8ರ ಮಧ್ಯರಾತ್ರಿಯಿಂದ 9ರ ಬೆಳಗಿನ ಜಾವದ ಅವಧಿಯಲ್ಲಿ ಈ ಪೈಶಾಚಿಕ ಕೃತ್ಯ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರಕ್ಕೆ ಒಳಗಾದ ಮಹಿಳೆ ಮತ್ತು ಆಕೆಯ ಸಂಬಂಧಿ ಈ ಬಗ್ಗೆ ಶಹಾಪುರ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಹಿಳೆ ಹೊತ್ತೊಯ್ದು ಅತ್ಯಾಚಾರ ಪ್ರಕರಣ

ಘಟನೆಯ ವಿವರ

ಸಂತ್ರಸ್ತ ಮಹಿಳೆ ಹಾಗೂ ಆಕೆಯ ಸಂಬಂಧಿ ದೇವಸ್ಥಾನಕ್ಕೆ ತೆರಳಿ ತಡರಾತ್ರಿ ಮನೆಗೆ ವಾಪಸಾಗುತ್ತಿದ್ದರು. ಇದನ್ನು ಗಮನಿಸಿದ ಮದ್ಯದ ಅಮಲಿನಲ್ಲಿದ್ದ ಇಬ್ಬರು ಕಾಮುಕ ಯುವಕರು, ಆಟೋದಲ್ಲಿ ಹಿಂಬಾಲಿಸಿದ್ದಾರೆ. ಯಾದಗಿರಿ ಶಹಾಪುರ ಮಾರ್ಗ ಮಧ್ಯ ಬೈಕ್​​ಗೆ ಆಟೋ ಅಡ್ಡ ಹಾಕಿದ್ದಾರೆ. ನಂತರ ಮಹಿಳೆಯ ಜೊತೆಗಿದ್ದ ವ್ಯಕ್ತಿಯನ್ನು ಥಳಿಸಿ ಮಹಿಳೆಯನ್ನು ಹೊತ್ತೊಯ್ದು ಅತ್ಯಾಚಾರವೆಸಗಿದ್ದಾರೆ. ಸದ್ಯ ಇಬ್ಬರು ಕಾಮುಕರನ್ನು ಶಹಾಪೂರ ಪೊಲೀಸರು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details