ಕರ್ನಾಟಕ

karnataka

ETV Bharat / state

ಹಾಡಹಗಲೇ ರಸ್ತೆ ಬಳಿ ಗಾಂಜಾ ಮಾರಾಟ: ಆರೋಪಿ ಅಂದರ್​ - marijuna selling latest news

ಶಹಾಪುರ ಪಟ್ಟಣದ ಸಮೀಪದ ಹೊಸಪೇಟೆ ಕ್ರಾಸ್ ಬಳಿ ಪ್ಲಾಸ್ಟಿಕ್ ಚೀಲದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಚಂದ್ರಶೇಖರ್ ಹೊಸೂರು ಎಂಬುವವನನ್ನ ಭೀಮರಾಯನ ಗುಡಿ ಪೊಲೀಸರು ಬಂಧಿಸಿ ಸುಮಾರು 5ಸಾವಿರ ರೂ. ಹಾಗೂ 900ಗ್ರಾಂ ಅಕ್ರಮ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

Selling marijuana near the road: accused arrested
ಹಾಡಹಗಲೇ ರಸ್ತೆ ಬಳಿ ಗಾಂಜಾ ಮಾರಾಟ: ಆರೋಪಿ ಅಂದರ್​

By

Published : Mar 19, 2020, 9:28 AM IST

ಯಾದಗಿರಿ: ಹಾಡಹಗಲೇ ರಸ್ತೆ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಪೆಡ್ಲರ್​​ಅನ್ನು ಭೀಮರಾಯನ ಗುಡಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಬಂಧಿಸಿದ್ದಾರೆ.

ಜಿಲ್ಲೆಯ ಶಹಾಪುರ ಪಟ್ಟಣದ ಸಮೀಪದ ಹೊಸಪೇಟೆ ಕ್ರಾಸ್ ಬಳಿ ಪ್ಲಾಸ್ಟಿಕ್ ಚೀಲದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಚಂದ್ರಶೇಖರ್ ಹೊಸೂರು ಎಂಬುವವನನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಸುಮಾರು 5ಸಾವಿರ ರೂ. ಹಾಗೂ 900ಗ್ರಾಂ ಅಕ್ರಮ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಆರೋಪಿ ವಿರುದ್ಧ ಭೀಮರಾಯನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details