ETV Bharat Karnataka

ಕರ್ನಾಟಕ

karnataka

ETV Bharat / state

ಕೊರೊನಾ ಕಂಟಕದಿಂದ ಚೇಳಿನ ಜಾತ್ರೆಯೂ ರದ್ದು, ನಿರಾಶೆಗೊಂಡ ಭಕ್ತವೃಂದ - ಕೊಂಡಮ್ಮದೇವಿ ಮಂದಿರದ ಜಾತ್ರೆ

ಜಾತ್ರೆಯಲ್ಲಿ ಭಕ್ತರು ಮೈಮೇಲೆ ಚೇಳು ಹಾಕಿಕೊಂಡು ಖುಷಿಯಿಂದ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ಕ್ಷೇತ್ರಕ್ಕೆ ಕೊಂಡಮ್ಮ ದೇವಿ ಕೃಪೆ ಇರುವುದರಿಂದ ಚೇಳು ಕಚ್ಚುವುದಿಲ್ಲ ಎನ್ನುವುದು ಇಲ್ಲಿಯ ಭಕ್ತರ ನಂಬಿಕೆ..

Scorpion fair canceled
ಕೊಂಡಮ್ಮದೇವಿ ಜಾತ್ರೆ ರದ್ದು
author img

By

Published : Jul 25, 2020, 9:52 PM IST

ಯಾದಗಿರಿ: ಚೇಳಿನ ಜಾತ್ರೆ ಎಂದೇ ಖ್ಯಾತಿಯಾಗಿರುವ ಗಿರಿನಾಡ ಕಂದಕೂರ ಗ್ರಾಮದ ಬೆಟ್ಟದಲ್ಲಿರುವ ಕೊಂಡಮ್ಮದೇವಿ ಜಾತ್ರೆಯು ಕೊರೊನಾ ಕಾರಣದಿಂದಾಗಿ ಈ ಬಾರಿ ರದ್ಧಾಗಿದೆ.

ಕೊಂಡಮ್ಮದೇವಿ ಜಾತ್ರೆ ರದ್ದು

ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದ ಬೆಟ್ಟದಲ್ಲಿರುವ ಸುಪ್ರಸಿದ್ಧ ಕೊಂಡಮ್ಮದೇವಿ ಮಂದಿರದ ಜಾತ್ರೆಯು ನಾಗರಪಂಚಮಿ ದಿನ ಪ್ರತೀ ವರ್ಷ ಅದ್ದೂರಿಯಾಗಿ ನಡೆಯುತ್ತಿತ್ತು. ಜಾತ್ರೆಯಲ್ಲಿ ಭಕ್ತರು ಮೈಮೇಲೆ ಚೇಳು ಹಾಕಿಕೊಂಡು ಖುಷಿಯಿಂದ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ಕ್ಷೇತ್ರಕ್ಕೆ ಕೊಂಡಮ್ಮ ದೇವಿ ಕೃಪೆ ಇರುವುದರಿಂದ ಚೇಳು ಕಚ್ಚುವುದಿಲ್ಲ ಎನ್ನುವುದು ಇಲ್ಲಿಯ ಭಕ್ತರ ನಂಬಿಕೆ. ಹೀಗಾಗಿ ಈ ವಿಶಿಷ್ಠ ಜಾತ್ರೆಯನ್ನ ನೋಡುವುದಕ್ಕೆ ಯಾದಗಿರಿ ಸೇರಿ ಸುತ್ತಲ ಜಿಲ್ಲೆಯ ಜನರು ಪ್ರತಿ ವರ್ಷ ಆಗಮಿಸುತ್ತಿದ್ದರು. ಆದರೆ, ಈ ಬಾರಿ ಜಿಲ್ಲೆಯಲ್ಲಿ ಕೊರೊನಾ ತಾಂಡವವಾಡಿದ್ದು, ಈ ವಿಶಿಷ್ಟ ಜಾತ್ರೆಯ ಆಚರಣೆಗೆ ಬ್ರೇಕ್ ಬಿದ್ದಿದೆ.

ಕಂದಕೂರ ಗ್ರಾಮದಲ್ಲಿ ನಿನ್ನೆ ಡಂಗೂರ ಸಾರಿಸುವ ಮೂಲಕ ಇಂದು ಜಾತ್ರೆ ನಡೆಸದಂತೆ ಜಿಲ್ಲಾಡಳಿತ ಮನವಿ ಮಾಡಿತ್ತು. ಅದಲ್ಲದೆ, ಭಕ್ತರು ಜಾತ್ರೆಗೆ ಬರದಂತೆ ಕೊಂಡಮಯಿ ಅರ್ಚಕರು ಸಹ ಮನವಿ ಮಾಡಿಕೊಂಡಿದ್ದರು.

ABOUT THE AUTHOR

...view details