ಸುರಪುರ(ಯಾದಗಿರಿ):ತಾಲೂಕಿನ ಯಾಳಗಿ ಸದ್ಗುರು ಮಠದ ವತಿಯಿಂದ ಧಾರವಾಡ, ಬಾಗಲಕೋಟೆ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿನ 11 ಸಾವಿರ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು.
ಸದ್ಗುರು ಮಠದಿಂದ ವಿವಿಧ ಜಿಲ್ಲೆಗಳ 11 ಸಾವಿರ ಬಡ ಕುಟುಂಬಗಳಿಗೆ ಆಹಾರ ಧಾನ್ಯ ವಿತರಣೆ - yadagiri news
ಲಾಕ್ಡೌನ್ನಿಂದಾಗಿ ಹಲವಾರು ಬಡ ಕುಟುಂಬಗಳ ಜೀವನ ಕಷ್ಟಕರವಾಗಿದ್ದು, ಅಂತಹ 11 ಸಾವಿರ ಕುಟುಂಬಗಳಿಗೆ ಸದ್ಗುರು ಮಠದ ವತಿಯಿಂದ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು.
ಸದ್ಗುರು ಮಠದಿಂದ ವಿವಿಧ ಜಿಲ್ಲೆಗಳ 11 ಸಾವಿರ ಬಡ ಕುಟುಂಬಗಳಿಗೆ ಆಹಾರ ಧಾನ್ಯ ವಿತರಣೆ
ಲಾಕ್ಡೌನ್ನಿಂದಾಗಿ ಹಲವಾರು ಬಡ ಕುಟುಂಬಗಳ ಜೀವನ ಕಷ್ಟಕರವಾಗಿದ್ದು, ಅಂತಹ ಕುಟುಂಬಗಳ ನೆರವಿಗೆ ಸದ್ಗುರು ಸಂಸ್ಥಾನ ಮುಂದಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸದ್ಗುರು ಮಠದ ರಾಮಪ್ಪಯ್ಯ ಸ್ವಾಮೀಜಿ, ಭಕ್ತರು ಮಠಕ್ಕೆ ಸಾಕಷ್ಟು ದಾನ-ಧರ್ಮ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ರಾಜ್ಯದ ಜನರ ನೆರವಿಗೆ ನಿಲ್ಲುವುದು ಎಲ್ಲಾ ಮಠಗಳ ಆದ್ಯ ಕರ್ತವ್ಯವಾಗಿದೆ.
ಈಗಾಗಲೇ 11 ಸಾವಿರ ಆಹಾರ ಕಿಟ್ಗಳನ್ನ ವಿತರಣೆ ಮಾಡಿದ್ದೇವೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಆಹಾರ ಧಾನ್ಯಗಳನ್ನ ವಿತರಿಸಲಾಗುತ್ತದೆ ಎಂದಿದ್ದಾರೆ.