ಯಾದಗಿರಿ: ಇತ್ತೀಚಿಗೆ ರಾಜೀವ್ ಗಾಂಧಿ ನಗರದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಹ್ಮದ್ ಸಾಜಿದ್ ಅಬ್ದುಲ್ ವಾಹಿದ್, ಸೈಯದ್ ಮುಸ್ಲಿಯಾರ್ ಸೈಯದ್ ಗೌಸ್ ಕುರುಡಿ, ಮೆಹಬೂಬ್ ಮಹ್ಮದ್ ಹುಸೇನ್ ಪಟೇಲ್, ಶಹಾಬಾಜ್ ಹೈಯಾಸ್ ಮಹ್ಮದ್ ಉಸ್ಮಾನ್ ಶೇಖ್ ಬಂಧಿತ ಆರೋಪಿಗಳು.
ಘಟನೆ ಹಿನ್ನೆಲೆ : ದೀಪಕ್ ನಂದಕಿಶೋರ್ ಜವ್ಹಾರ್ ಮನೆಯಲ್ಲಿ ಫೆಬ್ರವರಿ 24 ರಂದು ರಾತ್ರಿ 9.30 ರ ಸುಮಾರಿಗೆ ದರೋಡೆ ನಡೆದಿತ್ತು. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾಲ್ಕು ಜನ ಕಳ್ಳರು ಮನೆಗೆ ನುಗ್ಗಿ ಚಾಕು, ಕಬ್ಬಿಣದ ಸ್ಕ್ಯಾನರ್ ತೋರಿಸಿ ದೂರುದಾರ ಮತ್ತು ಅವರ ಮನೆಯವರಿಗೆ ಹೆದರಿಕೆ ಹಾಕಿ ಭಯಹುಟ್ಟಿಸಿದ್ದರು. ಬೆಡ್ ರೂಮಿನ ಆಲಮಾರಿಯಲ್ಲಿದ್ದ ನಾಲ್ಕು ತೊಲೆಯ ಚಿನ್ನಾಭರಣ, ಬೋಳಮಾರ ಸರ, ಬೆಳ್ಳಿಯ ಕಾಲುಚೈನ್, ನಗದು ಹಣ 5000 ರೂ. ಗಳು, ಐದು ಮೊಬೈಲ್ ಫೋನ್‌ಗಳು ಹೀಗೆ 19.15 ಲಕ್ಷ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದರು.
ಇದನ್ನೂ ಓದಿ :ಪೀಠೋಪಕರಣ ಗೋದಾಮಿನಲ್ಲಿ ಭಾರಿ ಬೆಂಕಿ ಅವಘಡ: ತೀವ್ರಗತಿಯಲ್ಲಿ ಬೆಂಕಿ ನಂದಿಸುವ ಕಾರ್ಯ
ಆರೋಪಿ ಮೇಲೆ ಗುಂಡು ಹಾರಿಸಿ ಬಂಧನ : ತನಿಖೆಗಾಗಿ ಎಸ್ಪಿ ತಂಡ ರಚಿಸಿದ್ದರು. ಪ್ರಮುಖ ಆರೋಪಿ ಮಹ್ಮದ್ ರಫಿ ಈತನ ಹತ್ತಿರ ಪಿಸ್ತೂಲ್ ಇದ್ದ ಬಗ್ಗೆ ಖಚಿತ ಮಾಹಿತಿ ಇದ್ದು, ಯಾದಗಿರಿ ನಗರದ ವರ್ಕನಳ್ಳಿ ಭಾಗದಲ್ಲಿ ಒಂದೇ ಕಡೆ ಅಡಗಿ ಕುಳಿತಿದ್ದ ಆರೋಪಿ ಮಹಮ್ಮದ್ ರಫಿ ಮೇಲೆ ಸಿಪಿಐ ಸುನೀಲ್ ನೇತೃತ್ವದ ತಂಡ ಸೋಮವಾರ ಬೆಳ್ಳಂಬೆಳ್ಳಗ್ಗೆ ದಾಳಿ ನಡೆಸಿದೆ.