ಯಾದಗಿರಿ :ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್ ಉಪೇಂದ್ರ ಅವರ 52 ನೇ ಜನ್ಮದಿನವನ್ನು ಅಭಿಮಾನಿಗಳು ನಗರದಲ್ಲಿ ಸರಳವಾಗಿ ಆಚರಿಸಿದರು.
ನೋಟ್ಬುಕ್ ವಿತರಿಸಿ ಬುದ್ದಿವಂತನ ಹುಟ್ಟಿದಬ್ಬ ಆಚರಣೆ - ಯಾದಗಿರಿ
ಉಪೇಂದ್ರ ಅವರ 52 ನೇ ಜನ್ಮದಿನವನ್ನು ಅಭಿಮಾನಿಗಳು ಯಾದಗಿರಿಯಲ್ಲಿಂದು ಸರಳ ರೀತಿಯಲ್ಲಿ ಆಚರಿಸಿದರು.
ನೋಟ್ಬುಕ್ ವಿತರಿಸುವ ಮೂಲಕ ಟೋಪಿವಾಲನ ಬರ್ತ್ಡೇ ಸಂಭ್ರಮ
ನಗರದ ಕರುಣಾಲಯ ಮಕ್ಕಳ ಪಾಲನ ಕೇಂದ್ರದಲ್ಲಿ ಉಪೇಂದ್ರ ಅವರ ಕಟೌಟ್ ಹಾಕಿ ಅಭಿಮಾನಿಗಳು ಕೇಕ್ ಕತ್ತರಿಸುವ ಮೂಲಕ ಉಪೇಂದ್ರ ಅವರ ಜನ್ಮ ದಿನವನ್ನು ಆಚರಿಸಿದರು. ಬಳಿಕ ಮಕ್ಕಳಿಗೆ ನೋಟ್ ಬುಕ್ ಮತ್ತು ಮಾಸ್ಕ್ ವಿತರಿಸಲಾಯಿತು.
ಕೊರೊನಾ ಹಿನ್ನೆಲೆಯಲ್ಲಿ ಉಪೇಂದ್ರ ಅಭಿಮಾನಿಗಳ ಬಳಗದ ಅಧ್ಯಕ್ಷ ಅನೀಲ್ ಮ್ಯಾಗೇರಿ ಹಾಗೂ ಇತರರು ಭಾಗವಹಿಸಿ ನೆಚ್ಚಿನ ನಟನಿಗೆ ಶುಭಕೋರಿದರು.