ಯಾದಗಿರಿ:ಪ್ರವಾಹ ಸಂತ್ರಸ್ತರನ್ನು ರಕ್ಷಿಸಲು ಬಂದ ಭಾರತೀಯ ಸೈನ್ಯ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಯೋಧರಿಗೆ ಮಹಿಳೆಯರು ರಾಖಿ ಕಟ್ಟಿ ಅದ್ಧೂರಿಯಾಗಿ ಬೀಳ್ಕೊಟ್ಟಿದ್ದಾರೆ.
NDRF ಸಿಬ್ಬಂದಿಗೆ ರಾಖಿ ಕಟ್ಟಿದ ದಾದಿಯರು.. ಹೋಗಿ ಬರ್ತೀರಾ ಅಣ್ಣಂದಿರೇ.. - ಜನರ ಪ್ರಾಣ ರಕ್ಷಿಸಿದ ಎನ್ ಡಿ ಆರ್‌ಎಫ್ ಪಡೆ
ಪ್ರವಾಹ ಪೀಡಿತ ಪ್ರದೇಶಗಳಿಗೆ ಆಗಮಿಸಿ ತಮ್ಮ ಜೀವದ ಹಂಗು ತೊರೆದು ಜನರ ಪ್ರಾಣ ರಕ್ಷಿಸಿದ NDRF ಪಡೆ ಮತ್ತು ಯೋಧರಿಗೆ ರಾಕಿ ಕಟ್ಟುವ ಮೂಲಕ ಹುಣಸಗಿ ತಾಲೂಕಿನ ನೀರೆಯರು ಬೀಳ್ಕೊಟ್ಟರು.
![NDRF ಸಿಬ್ಬಂದಿಗೆ ರಾಖಿ ಕಟ್ಟಿದ ದಾದಿಯರು.. ಹೋಗಿ ಬರ್ತೀರಾ ಅಣ್ಣಂದಿರೇ..](https://etvbharatimages.akamaized.net/etvbharat/prod-images/768-512-4155787-thumbnail-3x2-vickyjpg.jpg)
ಹುಣಸಗಿ ತಾಲೂಕಿನ ಬಸವ ಸಾಗರ ಜಲಾಶಯದಿಂದ ಕೃಷ್ಣ ನದಿಗೆ ನೀರು ಹರಿಸಿದ ಹಿನ್ನೆಲೆ ಜಿಲ್ಲೆಯಾದ್ಯಂತ ಜನರು ತತ್ತರಿಸಿ ರೋಸಿ ಹೋಗಿದ್ದರು. ಈ ಹಿನ್ನೆಲೆ ಪ್ರವಾಹದಲ್ಲಿ ಸಿಲುಕಿದ ಸಂತ್ರಸ್ತರನ್ನುNDRF ಪಡೆ ಮತ್ತು ಯೋಧರು ಸಂತ್ರಸ್ತರನ್ನು ರಕ್ಷಿಸಿದ್ದರು. ಈ ಮಧ್ಯೆ ಬಸವ ಸಾಗರ ಜಲಾಶಯದ ಪ್ರವಾಹ ಕಡಿಮೆಯಾದ ಹಿನ್ನೆಲೆ, ಕೇಂದ್ರ ವಿಪತ್ತು ನಿರ್ವಹಣಾ ಪಡೆಯ ಯೋಧರು ಮರಳಿ ಹಿಂತಿರಿಗುತ್ತಿದ್ದರು. ಆಗ ಮಹಿಳೆಯರು ಹಾಗೂ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಯರು, ಶರಣ ಸಂತತಿ ಧರ್ಮದವರು ರಾಖಿ ಹಬ್ಬದ ಪ್ರಯುಕ್ತ ಇಂದು ಕೇಂದ್ರ ವಿಪತ್ತು ನಿರ್ವಹಣಾ ಪಡೆ ಯೋಧರಿಗೆ ರಾಖಿ ಕಟ್ಟಿ ಸೋದರ ಪ್ರೀತಿ ತೋರಿಸಿದರು.