ಕರ್ನಾಟಕ

karnataka

ETV Bharat / state

ನೂತನ ಹುಣಸಗಿ ತಾಲೂಕು ಸಾಮಾನ್ಯ ಸಭೆಗೆ ಚಾಲನೆ ನೀಡಿದ ರಾಜುಗೌಡ - ಸಾಮಾನ್ಯ ಸಭೆಗೆ ಚಾಲನೆ ನೀಡಿದ ರಾಜುಗೌಡ

ಕಳೆದ ಕೆಲ ದಿನಗಳ ಹಿಂದೆ ಆರಂಭಗೊಂಡಿರುವ ನೂತನ ಹುಣಸಗಿ ತಾಲೂಕು ಪಂಚಾಯತ್‌ನ ಸಾಮಾನ್ಯ ಸಭೆಯನ್ನು ಇಂದು ನಡೆಸಲಾಗಿದ್ದು, ಮೊದಲ ಸಾಮಾನ್ಯ ಸಭೆಗೆ ಸುರಪುರ ಶಾಸಕ ನರಸಿಂಹ ನಾಯಕ ರಾಜುಗೌಡ ಚಾಲನೆ ನೀಡಿದರು.

Raju Gowda opaning new general meeting hunasagi taluk
ನೂತನ ಹುಣಸಗಿ ತಾಲೂಕು ಸಾಮಾನ್ಯ ಸಭೆಗೆ ಚಾಲನೆ ನೀಡಿದ ರಾಜುಗೌಡ

By

Published : May 29, 2020, 10:11 PM IST

ಸುರಪುರ: ಹೊಸದಾಗಿ ಆರಂಭಗೊಂಡಿರುವ ಹುಣಸಗಿ ತಾಲೂಕು ಪಂಚಾಯತಿಯಲ್ಲಿ ಮೊದಲ ಸಾಮಾನ್ಯ ಸಭೆಗೆ ಶಾಸಕ ರಾಜುಗೌಡ ಚಾಲನೆ ನೀಡಿದ್ದಾರೆ.

ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹಾಗೂ ಹುಣಸಗಿ ತಾಲೂಕು ಪಂಚಾಯಿತಿಯ ಆಡಳಿತಾಧಿಕಾರಿ ಮುಕ್ಕಣ್ಣ ಕರೆಗಾರ ಸಿದ್ದರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಅಂಬರೀಶ್ ಉಪಸ್ಥಿತರಿದ್ದರು. ಸಭೆಯನ್ನು ಉದ್ದೇಶಿಸಿ ಶಾಸಕ ರಾಜುಗೌಡ ಮಾತನಾಡಿ ಇಂದು ಕೊರೊನಾ ವೈರಸ್ ಎಲ್ಲೆಡೆ ಮಹಾ ಮಾರಿಯಾಗಿ ಹಬ್ಬುತ್ತಿದೆ ಇದರ ಬಗ್ಗೆ ಸದಾಕಾಲ ಜಾಗೃತಿ ವಹಿಸುವಂತೆ ತಿಳಿಸಿದರು.

ಅಲ್ಲದೆ ಹುಣಸಗಿ ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಕಾಮಗಾರಿಗಳು ನಡೆಯುವಂತೆ ಹಾಗೂ ಯಾವುದೇ ಗ್ರಾಮದಲ್ಲಿ ಮೂಲಭೂತ ಸಮಸ್ಯೆಗಳು ತಲೆದೋರದಂತೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ನೂತನ ತಾಲೂಕು ಪಂಚಾಯಿತಿಗೆ ಸರ್ರಕಾ 1.30 ಕೋಟಿ ರೂ. ಅನುದಾನ ನೀಡಿದ್ದು, ಇದನ್ನು ಸದುಪಯೋಗಪಡಿಸಿಕೊಂಡು ತಾಲೂಕಿನ ಅಭಿವೃದ್ಧಿಗೆ ಮುಂದಾಗುವಂತೆ ಕರೆ ನೀಡಿದರು.

ನೂತನ ಹುಣಸಗಿ ತಾಲೂಕು ಸಾಮಾನ್ಯ ಸಭೆಗೆ ಚಾಲನೆ ನೀಡಿದ ರಾಜುಗೌಡ

ಸಭೆಯಲ್ಲಿ ಸುರಪುರ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ವಿಶ್ವನಾಥ ಯಾದಗೀರ್ ಕಾರ್, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಮೌನೇಶ್ಕಂಬಾರ್ ಸೇರಿದಂತೆ ಅನೇಕ ಜನ ತಾಲೂಕು ಪಂಚಾಯಿತಿ ಸದಸ್ಯರು ಹಾಗೂ ಇತರೆ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. ಇದೇ ಸಂದರ್ಭದಲ್ಲಿ ಮೊದಲ ತಾಲೂಕು ಪಂಚಾಯಿತಿಸಭೆಗೆ ಆಗಮಿಸಿದ್ದ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ABOUT THE AUTHOR

...view details