ಯಾದಗಿರಿ: ತಮಟೆ ವಿಚಾರವಾಗಿ ವ್ಯಕ್ತಿಯೊರ್ವನನ್ನ ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಗುರಮಿಠಕಲ್ ತಾಲೂಕಿನ ಹೊಸಹಳ್ಳಿ (ಎಸ್) ತಾಂಡಾದಲ್ಲಿ ನಡೆದಿದೆ.
ತಮಟೆ ವಿಚಾರವಾಗಿ ಗಲಾಟೆ: ವ್ಯಕ್ತಿಯೊರ್ವನ ಕೊಲೆಯಲ್ಲಿ ಅಂತ್ಯ - End in the Murder of a Person
ಯಾದಗಿರಿ ಜಿಲ್ಲೆಯ ಗುರಮಿಠಕಲ್ ತಾಲೂಕಿನ ಹೊಸಹಳ್ಳಿ (ಎಸ್) ತಾಂಡಾದಲ್ಲಿ ತಮಟೆ ವಿಚಾರವಾಗಿ ಶುರುವಾದ ಗಲಾಟೆ, ಕೊಲೆಯಲ್ಲಿ ಅಂತ್ಯವಾಗಿದೆ.
ಬಾಲಪ್ಪ ಕೊಲೆಯಾದ ವ್ಯಕ್ತಿ
ಹೊಸಹಳ್ಳಿ ತಾಂಡಾದ ನಿವಾಸಿ ಬಾಲಪ್ಪ (45) ಕೊಲೆಯಾದ ವ್ಯಕ್ತಿ. ಮೊಹರಂ ಅಲೈ ಕುಣಿತ ವೇಳೆ ತಮಟೆ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆಯಾದ ಬಾಲಪ್ಪನ ಬಳಿ ಇರುವ ತಮಟೆಯನ್ನ ಅಲೈ ಕುಣಿತಕ್ಕಾಗಿ ಕೆಲವರು ತೆಗೆದುಕೊಂಡು ಹೋಗಿದ್ದಾರೆ.
ಬಳಿಕ ಬಾಲಪ್ಪ ತಮಟೆಯನ್ನ ಕೇಳಲು ಹೋದಾಗ ನಾಲ್ಕೈದು ಜನ ಕಟ್ಟಿಗೆ ಸೇರಿದಂತೆ, ಅದೇ ತಮಟೆಯಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.