ಕರ್ನಾಟಕ

karnataka

ETV Bharat / state

ಕುಡಿದ ಅಮಲಿನಲ್ಲಿ ಇಬ್ಬರ ನಡುವೆ ಜಗಳ: ಸಾವಿನಲ್ಲಿ ಅಂತ್ಯ - ಯಾದಗಿರಿ ನ್ಯೂಸ್

ಕುಡಿದ ಅಮಲಿನಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಆರಂಭವಾದ ಜಗಳ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ನಗರದಲ್ಲಿ ನಡೆದಿದೆ.

Quarrel between two people, ಇಬ್ಬರ ನಡುವೆ ಜಗಳ

By

Published : Nov 20, 2019, 8:45 PM IST

ಯಾದಗಿರಿ: ಕುಡಿದ ಅಮಲಿನಲ್ಲಿ ವ್ಯಕ್ತಿಗಳಬ್ಬರ ನಡುವೆ ಆರಂಭವಾದ ಜಗಳ ಸಾವಿನೊಂದಿಗೆ ಅಂತ್ಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಗಂಗಾ ನಗರ ಬಡವಾಣೆಯ ನಿವಾಸಿ ನರಸಪ್ಪ ಸಾವಿಗೀಡಾದ ವ್ಯಕ್ತಿ. ಜಮೀನಿನಲ್ಲಿ ಹತ್ತಿ ಬಿಡಿಸುವ ಕೂಲಿ ಕೆಲಸಗಾರರ ವಿಚಾರವಾಗಿ ನರಸಪ್ಪ ಮತ್ತ ಸಾಬಣ್ಣ ಎಂಬುವವರು ನಡುವೆ ಜಗಳ ಉಂಟಾಗಿದೆ. ಇಬ್ಬರೂ ಕಂಠಪೂರ್ತಿ ಕುಡಿದು ಕಿತ್ತಾಡುತ್ತಿದ್ದಾಗ ಪರಸ್ಪರ ಇಬ್ಬರೂ ನೂಕಾಡಿಕೊಂಡಿದ್ದಾರೆ. ಈ ವೇಳೆ ಕುಡಿದ ಅಮಲಿನಲ್ಲಿದ್ದ ನರಸಪ್ಪ ಕೆಳಕ್ಕೆ ಬಿದ್ದು ತಲೆಗೆ ಪೆಟ್ಟಾದ ಪರಿಣಾಮ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ನಗರ ಪೊಲೀಸರು ಸಾಬಣ್ಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ABOUT THE AUTHOR

...view details