ಕರ್ನಾಟಕ

karnataka

By

Published : Mar 17, 2022, 2:46 PM IST

ETV Bharat / state

'ಜೇಮ್ಸ್' ಟಿಕೆಟ್​ ಖರೀದಿಗೆ ನೂಕುನುಗ್ಗಲು: ಸ್ಕ್ರೀನ್​ ಮುಂದೆ ಕುಣಿದು ಕುಪ್ಪಳಿಸಿದ ಅಭಿಮಾನಿಗಳು

Puneet Rajkumar James movies releases.. 'ಜೇಮ್ಸ್' ಸಿನಿಮಾ ನೋಡಲು ಅಭಿಮಾನಿಗಳು ಇಂದು ನಸುಕಿನ ಜಾವವೇ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಅಲ್ಲದೇ, ಪುನೀತ್ ಅವರ ಹುಟ್ಟುಹಬ್ಬ ನಿಮಿತ್ತ ಸಿನಿಮಾ ವೀಕ್ಷಿಸಲು ಬರುವ ಜನರಿಗೆ ಶಿರಾ, ಲಾಡು, ಅನ್ನದಾನ ಮಾಡಲಾಯಿತು.

james-movie
james-movie

ಯಾದಗಿರಿ:ನಟಪುನೀತ್​​ ರಾಜ್​ಕುಮಾರ್​ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್​' ಚಲನಚಿತ್ರ ವೀಕ್ಷಿಸಲು ಜಿಲ್ಲೆಯಲ್ಲಿ ಅಭಿಮಾನಿಗಳು ಕಾತರರಾಗಿದ್ದು, ಶಹಾಪುರ ನಗರದ ಜಯಶ್ರೀ ಚಿತ್ರಮಂದಿರದಲ್ಲಿ ಟಿಕೆಟ್​ ಖರೀದಿಸುವಾಗನೂಕುನುಗ್ಗಲು ಉಂಟಾಗಿದೆ. ಚಿತ್ರಮಂದಿರದ ಸ್ಕ್ರೀನ್​ ಮುಂದೆ ಫ್ಯಾನ್ಸ್​ ಕುಣಿದು ಕುಪ್ಪಳಿಸಿದರು.

ತಮ್ಮ ನೆಚ್ಚಿನ ನಟ ಅಪ್ಪು ಅಭಿನಯದ ಕೊನೆಯ ಚಿತ್ರ 'ಜೇಮ್ಸ್' ಸಿನಿಮಾ ನೋಡಲು ಅಭಿಮಾನಿಗಳು ನಸುಕಿನ ಜಾವವೇ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಪುನೀತ್​ ಭಾವಚಿತ್ರಕ್ಕೆ ಕ್ಷಿರಾಭಿಷೇಕ ಮಾಡಿ ಅಭಿಮಾನ ಮೆರೆದರು. ಚಿತ್ರಮಂದಿರದ ಸುತ್ತಮುತ್ತಲು ಮತ್ತು ನಗರದ ರಸ್ತೆ ಬದಿಗಳು ಹಾಗೂ ಗಲ್ಲಿಗಳಲ್ಲಿ ಪುನೀತ್ ರಾಜಕುಮಾರ್ ಅವರ ಕಟೌಟ್, ಬ್ಯಾನರ್​ಗಳು ರಾರಾಜಿಸುತ್ತಿವೆ.

'ಜೇಮ್ಸ್' ಟಿಕೆಟ್​ ಖರೀದಿಗೆ ನೂಕುನುಗ್ಗಲು: ಸ್ಕ್ರೀನ್​ ಮುಂದೆ ಕುಣಿದು ಕುಪ್ಪಳಿಸಿದ ಅಭಿಮಾನಿಗಳು

ಅಲ್ಲದೇ, ಪುನೀತ್ ಅವರ ಹುಟ್ಟು ಹಬ್ಬ ನಿಮಿತ್ತ ಸಿನಿಮಾ ವೀಕ್ಷಿಸಲು ಬರುವ ಜನರಿಗೆ ಅಭಿಮಾನಿಗಳಿಂದ ಶಿರಾ, ಲಾಡು, ಅನ್ನದಾನ ಮಾಡಲಾಯಿತು. ಮುಂಚಿತವಾಗಿ ಟಿಕೆಟ್​ಕೊಳ್ಳಲು ಕೂಡ ಟಾಕೀಸ್​ನಲ್ಲಿ ಜನರು ಮುಗಿಬಿದ್ದಿರಿವುದು ಕಂಡುಬಂತು.

ಇದನ್ನೂ ಓದಿ:ಜೇಮ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇನೆ: ಬಿಎಸ್‌ವೈ

ABOUT THE AUTHOR

...view details