ಹುಣಸಗಿ:ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಕ್ಷಾಂತರ ರೂ.ಗಳ ಎಕ್ಸರೇ ಮಷಿನ್ ವಿದ್ಯುತ್ ಸಂಪರ್ಕವಿಲ್ಲದೇ ಧೂಳು ತಿನ್ನುತ್ತಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಹುಣಸಗಿ: ಸರ್ಕಾರಿ ಆಸ್ಪತ್ರೆಯಲ್ಲಿ ಎಕ್ಸ್ರೇ ಮಷಿನ್ ಕಾರ್ಯಾರಂಭಕ್ಕೆ ಆಗ್ರಹ
ಸರ್ಕಾರ ಆಸ್ಪತ್ರೆಗೆ ಲಕ್ಷಾಂತರ ರೂ ಮೌಲ್ಯದ ಎಕ್ಸರೇ ಮಷಿನ್ ನೀಡಿದೆ. ಆದರೆ ಈ ಮಷಿನ್ಗೆ ವಿದ್ಯುತ್ ಸಂಪರ್ಕವಿಲ್ಲದೆ ಜನರ ಸೇವೆ ಇಲ್ಲದಂತಾಗಿದೆ.
ಸಾರ್ವಜನಿಕರ ಆಗ್ರಹ
ಈ ಕುರಿತು ಸ್ಥಳೀಯ ದಲಿತ ಮುಖಂಡ ಮರಿಲಿಂಗಪ್ಪ ನಾಟೇಕರ್ ಮಾತನಾಡಿ, ಸರ್ಕಾರ ಆಸ್ಪತ್ರೆಗೆ ಎಕ್ಸರೇ ಮಷಿನ್ ನೀಡಿದೆ. ಆದರೆ ಈ ಮಷೀನ್ಗೆ ವಿದ್ಯುತ್ ಸಂಪರ್ಕವಿಲ್ಲದೆ ಜನರ ಸೇವೆ ಇಲ್ಲದಂತಾಗಿದೆ. ಇದರಿಂದಾಗಿ ಗ್ರಾಮೀಣ ಭಾಗದಿಂದ ಬರುವ ಜನರಿಗೆ ಎಕ್ಸರೇ ಸೇವೆ ಇಲ್ಲದೆ ಖಾಸಗಿಯವರನ್ನು ಆಶ್ರಯಿಸುವಂತಾಗಿದೆ ಎಂದರು.
ಸರ್ಕಾರ ಈ ಆಸ್ಪತ್ರೆಗೆ 62 ಮೆಗಾವ್ಯಾಟ್‌ನ ವಿದ್ಯುತ್ ಪರಿವರ್ತಕ ಅಳವಡಿಸಿ ಜನರಿಗೆ ಎಕ್ಸರೇ ಮಷಿನ್ ಸೇವೆ ದೊರೆಯಲು ಅನುಕೂಲ ಮಾಡಿಕೊಡಬೇಕು, ಇಲ್ಲವಾದಲ್ಲಿ ಸಾರ್ವಜನಿಕರೊಂದಿಗೆ ಹೋರಾಟ ನಡೆಸಬೇಕಾಗುವುದು ಎಂದು ಎಚ್ಚರಿಸಿದರು.