ಕರ್ನಾಟಕ

karnataka

ETV Bharat / state

ಬಡವರಿಗೆ ದಿನಸಿ ವಿತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಪಿಎಸ್​​ಐ - ಬಡವರಿಗೆ ದಿನಸಿ ವಿತರಣೆ

ದಿನಸಿ ಸಾಮಗ್ರಿಗಳನ್ನ ಬಡವರಿಗೆ ವಿತರಿಸುವ ಮೂಲಕ ತಮ್ಮ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಪಿಎಸ್​​ಐವೊಬ್ಬರು ಮಾದರಿಯಾಗಿದ್ದಾರೆ.

PSI celebrates birthday by distributing groceries to the poor
ಬಡವರಿಗೆ ದಿನಸಿ ವಿತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಪಿಎಸ್​​ಐ

By

Published : Apr 3, 2020, 7:33 PM IST

ಸುರಪುರ: ಪಿಎಸ್ಐ ಚೇತನ್ ಅವರು ತಮ್ಮ ಜನ್ಮದಿನದ ಪ್ರಯುಕ್ತ ತಾಲೂಕಿನ ತಳವಾರಗೇರಾ ಗ್ರಾಮದಲ್ಲಿ ಬಡವರಿಗೆ ಅಗತ್ಯ ವಸ್ತುಗಳನ್ನು ವಿತರಿಸಿ ಮಾದರಿಯಾಗಿದ್ದಾರೆ.

ನಗರ ಠಾಣೆಯ ಪಿಎಸ್ಐ ಚೇತನ್, ತಮ್ಮ ಹುಟ್ಟುಹಬ್ಬ ಹಿನ್ನೆಲೆ ಬಡವರಿಗೆ ಹತ್ತು ದಿನಗಳಿಗೆ ಆಗುವಷ್ಟು ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಸಾಬೂನು ಸೇರಿದಂತೆ ದಿನಸಿ ವಸ್ತುಗಳನ್ನು ನೀಡಿದರು.

ಪರಶುರಾಮ ನಾಟೇಕರ್, ತಿಗಳಪ್ಪ ಕವಡಿಮಟ್ಟಿ, ರಮೇಶ್ ಯಾದವ್, ಲಕ್ಷ್ಮಣ ಕವಡಿಮಟ್ಟಿ, ಬಸವರಾಜ ಹುಬ್ಬಳ್ಳಿ, ಪವನ್​​​, ಚೇತನ್​​, ಆಕಾಶ, ರಾಜುಗೌಡ ಸೇವಾ ಸಮಿತಿಯ ಕಾರ್ಯಕರ್ತರು ಇದ್ದರು.

ABOUT THE AUTHOR

...view details