ಕರ್ನಾಟಕ

karnataka

ETV Bharat / state

ಖಾಸಗಿ ಶಾಲಾ-ಕಾಲೇಜುಗಳಿಗೆ ಅನುದಾನ ವಿಸ್ತರಿಸಲು ಆಗ್ರಹಿಸಿ ಯಾದಗಿರಿಯಲ್ಲಿ ಪ್ರತಿಭಟನೆ - Protests from the Privet teachers at Shubas circle in Yadagiri

1995 ನಂತರದ ಶಾಲಾ, ಕಾಲೇಜ್​ಗಳಿಗೆ ಅನುದಾನ ವಿಸ್ತರಣೆ ಹಾಗೂ ಆರ್​ಟಿಇ ಶಿಕ್ಷಣ ಪುನಾರಂಭಕ್ಕೆ ಒತ್ತಾಯಿಸಿ ಯಾದಗಿರಿ ಜಿಲ್ಲೆಯ ಖಾಸಗಿ ಶಾಲಾ, ಕಾಲೇಜು ಶಿಕ್ಷಕರು ಪ್ರತಿಭಟನೆ ನಡೆಸಿದರು.

ಅನುದಾನ ವಿಸ್ತರಿಸಲು ಆಗ್ರಹಿಸಿ ಪ್ರತಿಭಟನೆ

By

Published : Nov 17, 2019, 10:38 AM IST

ಯಾದಗಿರಿ:1995 ನಂತರದ ಶಾಲಾ, ಕಾಲೇಜು​ಗಳಿಗೆ ಅನುದಾನ ವಿಸ್ತರಣೆ ಹಾಗೂ ಆರ್​ಟಿಇ ಶಿಕ್ಷಣ ಪುನಾರಂಭಕ್ಕೆ ಒತ್ತಾಯಿಸಿ ಜಿಲ್ಲೆಯ ಖಾಸಗಿ ಶಾಲಾ, ಕಾಲೇಜು ಶಿಕ್ಷಕರು ಪ್ರತಿಭಟನೆ ನಡೆಸಿದರು.

ಅನುದಾನ ವಿಸ್ತರಿಸಲು ಆಗ್ರಹಿಸಿ ಪ್ರತಿಭಟನೆ

ನಗರದ ಸುಭಾಷ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಈಗಾಗಲೇ ಸರ್ಕಾರ 1987- 93 ರಲ್ಲಿದ್ದ ಖಾಸಗಿ ಶಾಲಾ, ಕಾಲೇಜುಗಳಿಗೆ ಅನುದಾನ ನೀಡಿದೆ. 1995ರ ನಂತರದಲ್ಲಿ ಪ್ರಾರಂಭವಾದ ಯಾವುದೇ ಖಾಸಗಿ ಶಾಲೆಗಳಿಗೆ ಅನುದಾನ ವಿಸ್ತರಣೆ ಮಾಡುತ್ತಿಲ್ಲ. ಇದರಿಂದ ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಕೂಡಲೇ ಸರ್ಕಾರ 95ರ ನಂತರದ ಶಾಲೆ, ಕಾಲೇಜು​ಗಳನ್ನು ಅನುದಾನದಡಿ ಸೇರಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಶಾಲಾ ಶಿಕ್ಷಕರಂತೆ ಖಾಸಗಿ ಶಾಲಾ ಶಿಕ್ಷಕರನ್ನು ನೋಡಿಕೊಳ್ಳಬೇಕು, ಜ್ಯೋತಿ ಸಂಜೀವಿನ ಸ್ಕೀಂಅನ್ನು ಎಲ್ಲಾ ಶಿಕ್ಷಕರಿಗೂ ಜಾರಿ ಮಾಡಬೇಕು. 371(j)ಕಲಂ ಅಡಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಿಕೊಳ್ಳುವಂತೆ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

For All Latest Updates

TAGGED:

ABOUT THE AUTHOR

...view details