ಕರ್ನಾಟಕ

karnataka

ETV Bharat / state

ಸ್ಲಮ್ ನಿವಾಸಿಗಳಿಗೆ ನಿವೇಶನಕ್ಕೆ ಒತ್ತಾಯಿಸಿ ಯಾದಗಿರಿಯಲ್ಲಿ ಪ್ರತಿಭಟನೆ! - ಯಾದಗಿರಿ ಪ್ರೊಟೆಸ್ಟ್ ಲೆಟೆಸ್ಟ್ ನ್ಯೂಸ್

ಸ್ಲಮ್​ಗಳಲ್ಲಿ ವಾಸ ಮಾಡುತ್ತಿರುವ ಸ್ಲಮ್ ನಿವಾಸಿಗಳಿಗೆ ಸ್ಲಂ ಘೋಷಣೆ ಹಕ್ಕು ಪತ್ರ ನೀಡಿ ನಿವೇಶನ ನೀಡುವಂತೆ ಆಗ್ರಹಿಸಿ ಯಾದಗಿರಿಯಲ್ಲಿಂದು ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.

Protest in Yadgiri
ಸ್ಲಮ್ ನಿವಾಸಿಗಳಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಯಾದಗಿರಿಯಲ್ಲಿಂದು ಪ್ರತಿಭಟನೆ!

By

Published : Jan 30, 2020, 10:35 PM IST

ಯಾದಗಿರಿ: ಸ್ಲಮ್​ಗಳಲ್ಲಿ ವಾಸ ಮಾಡುತ್ತಿರುವ ಸ್ಲಮ್ ನಿವಾಸಿಗಳಿಗೆ ಸ್ಲಂ ಘೋಷಣೆ ಹಕ್ಕು ಪತ್ರ ನೀಡಿ ನಿವೇಶನ ನೀಡುವಂತೆ ಆಗ್ರಹಿಸಿ ಯಾದಗಿರಿಯಲ್ಲಿಂದು ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.

ಸ್ಲಮ್ ನಿವಾಸಿಗಳಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಯಾದಗಿರಿಯಲ್ಲಿಂದು ಪ್ರತಿಭಟನೆ!

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದ ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ಸದಸ್ಯರು ಸರ್ಕಾರ ಘೋಷಣೆ ಮಾಡಿರುವ ಸ್ಲಂ ನಿವಾಸಿಗಳಿಗೆ ನಿವೇಶನ ಹಕ್ಕು ಪತ್ರ ನೀಡಿ ಅನುಕೂಲ ಕಲ್ಪಿಸಿ ಕೊಡಬೇಕು ಎಂದು ಆಗ್ರಹಿಸಿದರು.

ನಗರದಲ್ಲಿ ಸುಮಾರು ವರ್ಷಗಳಿಂದ ಸ್ಲಂ ಗಳಲ್ಲಿ ವಾಸ ಮಾಡುತ್ತಿರುವ ಜನ ಗುಡಿಸಿಲಿನಲ್ಲಿ ವಾಸ ಮಾಡುತ್ತಿದ್ದು, ಅನೇಕಬಾರಿ ಜಿಲ್ಲಾಡಳಿತ ಮತ್ತು ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸರ್ಕಾರ ಕೂಡಲೇ ಬಡ ಸ್ಲಂ ಜನರಿಗೆ ನಿವೇಶನ ನೀಡಬೇಕು ಎಂದು ಒತ್ತಾಯಿಸಿದರು. ‌‌ತಮ್ಮ ಬೇಡಿಕೆ ಈಡೇರಿಸುವವರೆಗೂ ಅನಿರ್ದಿಷ್ಟಾವಧಿ ಧರಣಿ ಮುಂದುವರೆಸಲಾಗುದೆಂದು ಧರಣಿ ನಿರತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details