ಕರ್ನಾಟಕ

karnataka

ETV Bharat / state

ಪಂಪ್​ಸೆಟ್​​ಗಳಿಗೆ 18 ಗಂಟೆಗಳ ಕಾಲ ವಿದ್ಯುತ್ ನೀಡಲು  ಆಗ್ರಹಿಸಿ ಯಾದಗಿರಿಲ್ಲಿ ಪ್ರತಿಭಟನೆ

ಕೃಷಿ ಚಟುವಟಿಕೆಗಳನ್ನು ಮಾಡಲು ರೈತರ ಪಂಪ್ ಸೆಟ್ ಗಳಿಗೆ 18 ಗಂಟೆಗಳ ಕಾಲ ವಿದ್ಯುತ್ ನೀಡಬೇಕು ಎಂದು  ಆಗ್ರಹಿಸಿ ಜಯ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರು ಯಾದಗಿರಿಲ್ಲಿ ಪ್ರತಿಭಟನೆ ನಡೆಸಿದರು.

ProProtest in Yadgir test in Yadgir
ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರಿಂದ ಯಾದಗಿರಿಯಲ್ಲಿ ಪ್ರತಿಭಟನೆ

By

Published : Jan 6, 2020, 6:05 PM IST

ಯಾದಗಿರಿ:ರೈತರ ಪಂಪ್ ಸೆಟ್ ಗಳಿಗೆ 18 ಗಂಟೆಗಳ ಕಾಲ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರು ಯಾದಗಿರಿಲ್ಲಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರಿಂದ ಯಾದಗಿರಿಯಲ್ಲಿ ಪ್ರತಿಭಟನೆ
ನಗರದ ಜಿಲ್ಲಾಧಿಕಾರಿ ಕಚೇರಿ ಎದರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ವಡಗೇರಾ ತಾಲೂಕಿನ ಕೃಷ್ಣಾ ಹಾಗೂ ಭೀಮಾ ನದಿ ದಂಡೆಯ ರೈತರ ಪಂಪ್ ಸೇಟ್ ಗಳಿಗೆ ಈಗ ಜೇಸ್ಕಾಂ ಇಲಾಖೆ ಕೇವಲ 7 ತಾಸು ಮಾತ್ರ ವಿದ್ಯುತ್ ನೀಡುತಿದೆ. ಇದರಿಂದ ಭತ್ತ, ಹತ್ತಿ ಹಾಗೂ ಮೆಣಸಿನಕಾಯಿ ಬೆಳೆಗೆ ನೀರು ಬಿಡಲು ವಿದ್ಯುತ್ ಕೊರತೆಯಾಗುತ್ತಿದ್ದು ನೀರಿಲ್ಲದೆ ಬೆಳೆ ಒಣಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು..ಸರ್ಕಾರ ಕೂಡಲೇ ರೈತರ ಬೆಳೆಗೆ ಅನುಕೂಲವಾಗಲು 18 ಗಂಟೆ ವಿದ್ಯುತ್ ಪೂರೈಸಿ ರೈತರ ಹಿತ ಕಾಪಾಡಬೇಕೆಂದು ಪ್ರತಿಭಟನೆ ನಿರತರು ಜಿಲ್ಲಾಧಿಕಾರಿ ಮೂಲಕ ಒತ್ತಾಯಿಸಿದರು.

ABOUT THE AUTHOR

...view details