ಸುರಪುರ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳದ ಮುಖಂಡರು ಹುಣಸಗಿಯ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ.. ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳದಿಂದ ಪ್ರತಿಭಟನೆ.. - ಸುರಪುರದಲ್ಲಿ ಪ್ರತಿಭಟನೆ
ಬಡಜನರು ಅಂಗಡಿಗಳಿಗೆ ಹೋಗಿ ಅಗತ್ಯ ವಸ್ತುಗಳಾದ ಅಕ್ಕಿ, ಬೇಳೆ, ಬೆಲ್ಲ, ಸಕ್ಕರೆ ಅಲ್ಲದೇ ಸಾಬೂನು ಸೇರಿ ಯಾವ ವಸ್ತುಗಳನ್ನು ಖರೀದಿಸಿದರು ಕೂಡಾ ಅಂಗಡಿಯವರು ವಸ್ತುಗಳ ಬೆಲೆ ದುಪ್ಪಟ್ಟು ಮಾಡಿ ಜನರಲ್ಲಿ ಸುಲಿಗೆ ಮಾಡುತ್ತಿದ್ದಾರೆ.
![ಅಗತ್ಯ ವಸ್ತುಗಳ ಬೆಲೆ ಏರಿಕೆ.. ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳದಿಂದ ಪ್ರತಿಭಟನೆ.. Protest](https://etvbharatimages.akamaized.net/etvbharat/prod-images/768-512-05:13-kn-surpur-03-07-photo-essensiyal-item-rate-rise-kac10022jpg-07062020170037-0706f-1591529437-739.jpg)
ಕೊರೊನಾ ತಡೆಗೆ ಘೋಷಣೆಯಾದ ಲಾಕ್‌ಡೌನ್ ಕಾರಣದಿಂದ ಜನ ಕೆಲಸವಿಲ್ಲದೆ ಜೀವನ ನಿರ್ವಹಣೆಗೆ ಕಷ್ಟ ಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವ್ಯಾಪಾರಸ್ಥರು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದು ಖಂಡನೀಯ. ಬಡಜನರು ಅಂಗಡಿಗಳಿಗೆ ಹೋಗಿ ಅಗತ್ಯ ವಸ್ತುಗಳಾದ ಅಕ್ಕಿ, ಬೇಳೆ, ಬೆಲ್ಲ, ಸಕ್ಕರೆ ಅಲ್ಲದೇ ಸಾಬೂನು ಸೇರಿ ಯಾವ ವಸ್ತುಗಳನ್ನು ಖರೀದಿಸಿದರು ಕೂಡಾ ಅಂಗಡಿಯವರು ವಸ್ತುಗಳ ಬೆಲೆ ದುಪ್ಪಟ್ಟು ಮಾಡಿ ಜನರಲ್ಲಿ ಸುಲಿಗೆ ಮಾಡುತ್ತಿದ್ದಾರೆ.
ಈ ಕೂಡಲೇ ಇದನ್ನು ತಡೆಯಬೇಕು, ಇಲ್ಲವಾದ್ರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಕೆಲಹೊತ್ತು ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರ್ ವಿನಯ್ ಕುಮಾರ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳದ ಅಧ್ಯಕ್ಷ ಕಾಶಿನಾಥ್ ಸೇರಿ ಇತರರು ಉಪಸ್ಥಿತರಿದ್ದರು.