ಕರ್ನಾಟಕ

karnataka

ETV Bharat / state

ಸಿಂದಗಿಯಲ್ಲಿ ಯುವಕನ ಹತ್ಯೆ ಖಂಡಿಸಿ ಸುರಪುರದಲ್ಲಿ ದಲಿತ ಸೇನೆ ಪ್ರತಿಭಟನೆ - ಸಿಂದಗಿ ತಾಲೂಕಿನ ಬೂದಿಹಾಳದಲ್ಲಿ ದಲಿತ ಯುವಕನ ಹತ್ಯೆ

ದಲಿತ ಯುವಕನ ಹತ್ಯೆ ಪ್ರಕರಣದ ತನಿಖೆ ನಡೆಸಿ ಅಪರಾಧಿಗಳಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ದಲಿತ ಸೇನೆ ಸುರಪುರ ತಾಲೂಕು ಘಟಕದಿಂದ ಗ್ರೇಡ್-2 ತಹಶೀಲ್ದಾರ್ ಸೂಫಿಯಾ ಸುಲ್ತಾನ್​ಗೆ ಮನವಿ ಸಲ್ಲಿಸಲಾಗಿದೆ.

dsf
ಸಿಂದಗಿಯಲ್ಲಿ ದಲಿತ ಯುವಕನ ಹತ್ಯೆ ಖಂಡಿಸಿ ಸುರಪುರದಲ್ಲಿ ಪ್ರತಿಭಟನೆ

By

Published : Sep 1, 2020, 2:24 PM IST

ಸುರಪುರ: ವಿಜಯಪುರ ಜಿಲ್ಲೆಯ ಬೂದಿಹಾಳ ಗ್ರಾಮದಲ್ಲಿ ದಲಿತ ಯುವಕನ ಹತ್ಯೆ ಖಂಡಿಸಿ ದಲಿತ ಸೇನೆ ಸುರಪುರ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ಸಿಂದಗಿಯಲ್ಲಿ ದಲಿತ ಯುವಕನ ಹತ್ಯೆ ಖಂಡಿಸಿ ಸುರಪುರದಲ್ಲಿ ಪ್ರತಿಭಟನೆ

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸೇನೆ ತಾಲೂಕು ಅಧ್ಯಕ್ಷ ನಿಂಗಣ್ಣ ಎಂ ಗೋನಾಳ್ ಮಾತನಾಡಿ, ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ದಲಿತ ಸಮುದಾಯದ ಯುವಕ ಅನಿಲ್ ಇಂಗಳಗಿ ಎಂಬುವವರನ್ನು ಹಾಡುಹಗಲೇ ಬರ್ಬರವಾಗಿ ಕೊಲೆ ಮಾಡಲಾಗಿದೆ. ಯುವಕನ ಕೊಲೆಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಶಿಕ್ಷೆಗೊಳಪಡಿಸಬೇಕು ಹಾಗೂ ಯುವಕನ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸುವ ಜೊತೆಗೆ 5 ಎಕರೆ ಜಮೀನು ನೀಡಿ 25 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಜೊತೆಗೆ ಅವರ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಮತ್ತು ಪ್ರಕರಣವನ್ನು ಸಿಬಿಐ ತನಿಖೆಗೊಳಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೆ ರಾಜ್ಯದಲ್ಲಿ ನಿರಂತರವಾಗಿ ದಲಿತರ ಮೇಲೆ ಹಲ್ಲೆಗಳು ನಡೆಯುತ್ತಿದ್ದರೂ ಕ್ರಮಕ್ಕೆ ಒತ್ತಾಯಿಸದ ದಲಿತ ಸಮುದಾಯದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಸಂಸದ ರಮೇಶ ಜಿಗಜಿಣಗಿ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ABOUT THE AUTHOR

...view details