ಸುರಪುರ :ನಗರದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಿಂದ ಲಂಬಾಣಿ, ಬೋವಿ, ಕೊರಮ, ಕೊರಚ ಸಮುದಾಯಗಳನ್ನು ಕೈ ಬಿಡುವಂತೆ ಪತ್ರ ಚಳವಳಿ ನಡೆಸಿದರು. ಈ ವೇಳೆ ದಲಿತಪರ ಹೋರಾಟಗಾರರು ಸುರಪುರ ನಗರದ ರಂಗಂಪೇಟೆಯ ಹಸನಾಪುರದಲ್ಲಿ ಏಕಕಾಲಕ್ಕೆ ಐದು ನೂರು ಪತ್ರಗಳನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಿದರು.
ಲಂಬಾಣಿ, ಬೋವಿ, ಕೊರಮ, ಕೊರಚರನ್ನು ಪ.ಜಾ ಪಟ್ಟಿಯಿಂದ ಕೈಬಿಡಿ ಎಂದು ಆಗ್ರಹ - ಸುರಪುರದಲ್ಲಿ ಪ್ರತಿಭಟನೆ
ಸುರಪುರದಲ್ಲಿ ಲಂಬಾಣಿ, ಬೋವಿ, ಕೊರಮ, ಕೊರಚ ಸಮುದಾಯಗಳನ್ನು ಪ.ಜಾತಿ ಪಟ್ಟಿಯಿಂದ ಕೈ ಬಿಡುವಂತೆ ಪತ್ರ ಚಳುವಳಿ ನಡೆಸಲಾಯಿತು.
ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಪರಿಶಿಷ್ಟ ಜಾತಿ ಪಟ್ಟಿಯಿಂದ ಲಂಬಾಣಿ, ಬೋವಿ, ಕೊರಮ, ಕೊರಚ ಸಮುದಾಯಗಳನ್ನು ಕೈಬಿಡಬೇಕೆಂದು ಆಗ್ರಹಿಸಿದರು. ನಾವು ಅನೇಕ ವರ್ಷಗಳಿಂದ ಪರಿಶಿಷ್ಟ ಜಾತಿಗಳಿಗೆ ಅನ್ಯಾವಾಗುತ್ತಿರುವ ಬಗ್ಗೆ ಧ್ವನಿ ಎತ್ತುತ್ತಾ ಬರುತ್ತಿದೆ. ಈಗ ಸುಪ್ರೀಂಕೋರ್ಟ್ ಕೂಡ ಈ ಸಮುದಾಯಗಳನ್ನು ಸ್ಪರ್ಶ ಜಾತಿಗಳೆಂದು ಪರಿಗಣಿಸಿ ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಡಲು ತಿಳಿಸಿದೆ.
ಇದನ್ನು ಎತ್ತಿ ಹಿಡಿದು ನಮಗೆ ನ್ಯಾಯ ಒದಗಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಆಗ್ರಹಿಸಿದರು. ಈ ವೇಳೆ ತಾವು ಮುಖ್ಯಮಂತ್ರಿಗಳಿಗೆ ಬರೆದ ಪತ್ರಗಳನ್ನು ಪ್ರದರ್ಶಿಸುತ್ತಾ ಘೋಷಣೆಗಳನ್ನು ಕೂಗಿ ಆಗ್ರಹಿಸಿದರು.