ಸುರಪುರ(ಯಾದಗಿರಿ):ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಸುರಪುರ ತಾಲೂಕಿನ ದೇವಪುರ ಕ್ರಾಸ್ ಬಳಿ ರಸ್ತೆತಡೆ ನಡೆಸಲಾಯ್ತು.
ಎಪಿಎಂಸಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ರಸ್ತೆತಡೆ - ಯಾದಗಿರಿ ಸುದ್ದಿ
ಈಗಾಗಲೇ ಬರ ಮತ್ತು ನೆರೆ ಹಾವಳಿಯಿಂದ ತೊಂದರೆಯಲ್ಲಿರುವ ರೈತರನ್ನು ಈ ಕಾಯ್ದೆಯ ಮೂಲಕ ನಿರ್ಣಾಮಗೊಳಿಸಲಾಗುತ್ತಿದೆ. ಇದನ್ನು ಕರ್ನಾಟಕ ರಾಜ್ಯ ರೈತ ಸಂಘ ಸಹಿಸಲ್ಲ..
ಎಪಿಎಂಸಿ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ರೈತರನ್ನು ಸಂಕಷ್ಟಕ್ಕೆ ದೂಡಲು ಮುಂದಾಗಿರುವ ಸರ್ಕಾರದ ನಿಯಮ ಖಂಡನೀಯ. ಈ ಕಾಯ್ದೆಯನ್ನು ಜಾರಿಗೆ ತರುವುದರಿಂದ ರೈತರ ಬೆಳೆಗಳಿಗೆ ಸರಿಯಾದ ಬೆಲೆ ಸಿಗಲ್ಲ. ಈಗಾಗಲೇ ಬರ ಮತ್ತು ನೆರೆ ಹಾವಳಿಯಿಂದ ತೊಂದರೆಯಲ್ಲಿರುವ ರೈತರನ್ನು ಈ ಕಾಯ್ದೆಯ ಮೂಲಕ ನಿರ್ಣಾಮಗೊಳಿಸಲಾಗುತ್ತಿದೆ. ಇದನ್ನು ಕರ್ನಾಟಕ ರಾಜ್ಯ ರೈತ ಸಂಘ ಸಹಿಸಲ್ಲ.
ಇಂದು ರಸ್ತೆತಡೆ ಮೂಲಕ ಕಾಯ್ದೆ ಜಾರಿ ಕೈಬಿಡುವಂತೆ ಒತ್ತಾಯಿಸುತ್ತಿದ್ದೇವೆ. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದರು. ನಂತರ ತಹಶೀಲ್ದಾರ್ ನಿಂಗಣ್ಣ ಬಿರಾದಾರ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.