ಗುರುಮಠಕಲ್: ಯಾದಗಿರಿ ರಾಜ್ಯ ಹೆದ್ದಾರಿಯಲ್ಲಿ ಬಹುತೇಕ ರಸ್ತೆಗಳು ರಾಶಿ ಕಣಗಳಾಗಿ ಮಾರ್ಪಟ್ಟಿವೆ. ಇದರಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳೆ ರಾಶಿ ಕಣವಾಯ್ತು ಯಾದಗಿರಿ ರಾಜ್ಯ ಹೆದ್ದಾರಿ! - Gurumathkal-Yadagiri State Highway
ಗುರುಮಠಕಲ್-ಯಾದಗಿರಿ ರಾಜ್ಯ ಹೆದ್ದಾರಿಯಲ್ಲಿ ಬಹುತೇಕ ರಸ್ತೆಗಳು ರಾಶಿ ಕಣಗಳಾಗಿ ಮಾರ್ಪಟ್ಟಿವೆ. ತಮಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಕೃಷಿ ಇಲಾಖೆಗೆ ಅನ್ನದಾತರು ಹಲವು ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಎನ್ನಲಾಗಿದೆ.
![ಬೆಳೆ ರಾಶಿ ಕಣವಾಯ್ತು ಯಾದಗಿರಿ ರಾಜ್ಯ ಹೆದ್ದಾರಿ! asd](https://etvbharatimages.akamaized.net/etvbharat/prod-images/768-512-8732656-thumbnail-3x2-vish.jpg)
ರಾಶಿ ಕಣವಾಯ್ತು ಯಾದಗಿರಿ ರಾಜ್ಯ ಹೆದ್ದಾರಿ..!
ರಾಶಿ ಕಣವಾಯ್ತು ಯಾದಗಿರಿ ರಾಜ್ಯ ಹೆದ್ದಾರಿ..!
ರಾಶಿ ಮಾಡುವ ಕಾರ್ಯದಲ್ಲಿ ತೊಡಗಿರುವ ಜನ ರಸ್ತೆ ತುಂಬಾ ಬೆಳೆಯ ರಾಶಿ ಹಾಕಿ ಕಣ ಮಾಡುತ್ತಿದ್ದಾರೆ. ಇದರಿಂದ ದ್ವಿಚಕ್ರ ವಾಹನ ಸವಾರರು ಸಂಚರಿಸಲು ತಡಕಾಡಿ ಬಿದ್ದು ಗಾಯಗೊಳ್ಳುತ್ತಿದ್ದಾರೆ.
ಪ್ರತೀ ಹಳ್ಳಿಯಲ್ಲಿ ಕಣಕಟ್ಟೆ ನಿರ್ಮಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ರಸ್ತೆಯಲ್ಲಿ ರಾಶಿ ಕಣ ಮಾಡುವ ಬದಲು ರೈತರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ರಸ್ತೆಯಲ್ಲಿ ವಾಹನಗಳು ಸುಗಮವಾಗಿ ಸಾಗಲು ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.