ಕರ್ನಾಟಕ

karnataka

ETV Bharat / state

SSLCಯಲ್ಲಿ 593 ಅಂಕ ಗಳಿಸಿ ಯಾದಗಿರಿಗೆ ಕೀರ್ತಿ ತಂದ ಪ್ರಿಯದರ್ಶಿನಿ - undefined

ಪ್ರಿಯದರ್ಶಿನಿ ಎಂಬ ವಿದ್ಯಾರ್ಥಿನಿಯ ಎಸ್​ಎಸ್​ಎಲ್​ಸಿ  ಪರೀಕ್ಷೆಯಲ್ಲಿ 625 ಅಂಕಗಳಿಗೆ 593 ಅಂಕಗಳನ್ನು ಪಡೆದು 94.24 ಶೇಕಡಾವಾರು ಫಲಿತಾಂಶವನ್ನು ಪಡೆದು ಹಿಂದುಳಿದ ಜಿಲ್ಲೆಯಲ್ಲಿ ನಾವೂ ಮುಂದೆ ಇದ್ದೇವೆ ಎನ್ನುವುದನ್ನು ತೋರಿಸಿದ್ದಾಳೆ ಈ ವಿದ್ಯಾರ್ಥಿನಿ.

ಪ್ರಿಯದರ್ಶಿನಿ

By

Published : May 4, 2019, 11:21 PM IST

ಯಾದಗಿರಿ:ಹಿಂದೆ ಗುರು ಇರಬೇಕು, ಮುಂದೆ ಗುರಿ ಇರಬೇಕು ಎನ್ನುವ ನಾಣ್ಣುಡಿಯಂತೆ ಪ್ರತಿಯೊಬ್ಬರ ಜೀವನದಲ್ಲಿ ಗುರು ಇದ್ದಾಗ ಮಾತ್ರ ಗುರಿ ಸಾಧಿಸಲು ಸಾಧ್ಯ ಎಂದು ಹೇಳುತ್ತಾರೆ. ಆದ್ರೆ ಇಲೊಬ್ಬ ವಿದ್ಯಾರ್ಥಿನಿ ತಂದೆಯನ್ನೆ ಗುರುವನ್ನಾಗಿ ಸ್ವೀಕರಿಸಿ ಅವರು ಹೇಳಿದ ಹಾದಿಯಲ್ಲಿ, ಮಾರ್ಗದರ್ಶನದಲ್ಲಿ ಬೆಳೆದು ಜಿಲ್ಲೆಗೆ ಒಳ್ಳೆಯ ಹೆಸರು ತಂದಿದ್ದಾರೆ.

ಹೌದು, ಜಿಲ್ಲೆಯ ಪ್ರಿಯದರ್ಶಿನಿ ಎಂಬ ವಿದ್ಯಾರ್ಥಿನಿ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 593 ಅಂಕಗಳನ್ನು ಪಡೆದು 94.24 ಶೇಕಡಾವಾರು ಫಲಿತಾಂಶವನ್ನು ಪಡೆದು ಹಿಂದುಳಿದ ಜಿಲ್ಲೆಯಲ್ಲಿ ನಾವೂ ಮುಂದೆ ಇದ್ದೇವೆ ಎನ್ನುವುದನ್ನು ತೋರಿಸಿದ್ದಾಳೆ.

ಪ್ರಿಯದರ್ಶಿನಿ

ಡಿಡಿಯು ಇಂಟರ್​ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರಿಯದರ್ಶಿನಿ ಶಾಲೆಯ ಆಡಳಿತ ಮಂಡಳಿಯು ಮೆಚ್ಚುಗೆ ಪಡುವಂತಹ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ.

ವಿದ್ಯಾರ್ಥಿನಿ ತಂದೆ ರಾಜಪ್ಪ ಕೋಣಿಮನೆ ಚಂದ್ರಶೇಖರ್ ಅವರು ಸ್ನಾತಕೋತ್ತರ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದು, ಮಗಳ ಈ ಸಾಧನೆಗೆ ಸಹಕಾರಿಯಾಗಿದ್ದಾರೆ. ಪ್ರಿಯದರ್ಶಿನಿ ಹೆಚ್ಚು ಅಂಕಗಳನ್ನ ಪಡೆದು ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ. ಹಾಗೆ ಮುಂಬರುವ ದಿನಗಳಲ್ಲಿ ವೈದ್ಯೆಯಾಗಿ ಹಿಂದುಳಿದ ಜಿಲ್ಲೆಯಲ್ಲಿ ಸೇವೆ ಸಲ್ಲಿಸಬೇಕೆಂದು ಕನಸು ಕಟ್ಟಿ ಕೊಂಡಿದ್ದಾಳೆ.

For All Latest Updates

TAGGED:

ABOUT THE AUTHOR

...view details