ಕರ್ನಾಟಕ

karnataka

ETV Bharat / state

ಯಾದಗಿರಿ: ಗಂಡ ಮಾಡಿದ ಸಾಲಕ್ಕೆ ಹೆಂಡತಿ ಒತ್ತೆಯಾಳಾಗಿರಿಸಿಕೊಂಡ ಖಾಸಗಿ ಫೈನಾನ್ಸ್​.! - Private finance in punish wife for loan took by husband in Yadagiri news

ಖಾಸಗಿ ಫೈನಾನ್ಸ್ ಒಂದು ಗಂಡ ಮಾಡಿದ ಸಾಲಕ್ಕೆ ಹೆಂಡತಿ ಒತ್ತೆಯಾಳಾಗಿರಿಸಿಕೊಂಡ ಘಟನೆ ಯಾದಗಿರಿ ನಗರದ ಅಜೀಜ್ ಕಾಲೋನಿಯಲ್ಲಿ ನಡೆದಿದೆ. ಫೈನಾನ್ಸ್ ನಡೆಸುವ ಶಿವಶಂಕರ್, ಚಂದ್ರಕಲಾ, ಶಿವಮ್ಮ, ಪಾರ್ವತಿ ಎಂಬುವವರು ಈ ಕೃತ್ಯ ಎಸಗಿದ್ದಾರೆ ಎಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Private finance in punish wife for loan taken by husband in Yadagiri
ಗಂಡ ಮಾಡಿದ ಸಾಲಕ್ಕೆ ಹೆಂಡತಿಯನ್ನು ಒತ್ತೆಯಾಳಾಗಿರಿಸಿಕೊಂಡ ಖಾಸಗಿ ಫೈನಾನ್ಸ್

By

Published : Aug 31, 2021, 7:57 PM IST

ಯಾದಗಿರಿ: ನಗರದಲ್ಲಿ ಬಡ್ಡಿ ವ್ಯವಹಾರ ಮಿತಿ ಮೀರಿದ್ದು, ಖಾಸಗಿ ಫೈನಾನ್ಸ್​ಗಳಿಂದ ಸಾಲಗಾರರಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಖಾಸಗಿ ಫೈನಾನ್ಸ್​​​ವೊಂದು ಗಂಡ ಮಾಡಿದ ಸಾಲಕ್ಕೆ ಹೆಂಡತಿಯನ್ನು ಒತ್ತೆಯಾಳಾಗಿರಿಸಿಕೊಂಡ ಘಟನೆ ನಗರದ ಅಜೀಜ್ ಕಾಲೋನಿಯಲ್ಲಿ ನಡೆದಿದೆ.

ಗಂಡ ಮಾಡಿದ ಸಾಲಕ್ಕೆ ಹೆಂಡತಿಯನ್ನು ಒತ್ತೆಯಾಳಾಗಿರಿಸಿಕೊಂಡ ಖಾಸಗಿ ಫೈನಾನ್ಸ್

ಶಿವಶಂಕರ್ ಹೆಸರಿನ ಫೈನಾನ್ಸ್​ನಿಂದ ಸಾಲ ಮಾಡಿದ ಕುಟುಂಬಕ್ಕೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಶಿವಶಂಕರ್ ಫೈನಾನ್ಸ್​ನಲ್ಲಿ ಮಹಮ್ಮದ್​​ ಎನ್ನುವವರು ಮೂರು ಲಕ್ಷ ಸಾಲ ಪಡೆದಿದ್ದರು, ಸಮಯಕ್ಕೆ ಸರಿಯಾಗಿ ಅಸಲು ಮತ್ತು ಬಡ್ಡಿ ಕಟ್ಟಿದ್ದರು. ಹೀಗಿದ್ದರೂ ಫೈನಾನ್ಸ್​ನಿಂದ ಹೆಚ್ಚಿನ ಬಡ್ಡಿ ನೀಡಲು ಒತ್ತಾಯ ಮಾಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಹೆಚ್ಚಿನ ಬಡ್ಡಿ ನೀಡಲು ಮಹಮ್ಮದ್​ ಒಪ್ಪಿರಲಿಲ್ಲ. ಹೀಗಾಗಿ ಆತನ ಹೆಂಡತಿ ರಿಜ್ವಾನರನ್ನು ಕಚೇರಿಗೆ ಕರೆದುಕೊಂಡು ಹೋಗಿ ಒತ್ತೆಯಾಳಾಗಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಫೈನಾನ್ಸ್ ಮಾಲೀಕರು, ಮೂತ್ರ ವಿಸರ್ಜನೆಗೂ ಬಿಡದೇ ಚಿತ್ರ ಹಿಂಸೆ ನೀಡಿದ್ದಾರೆ. ಫೈನಾನ್ಸ್ ನಡೆಸುವ ಶಿವಶಂಕರ್, ಚಂದ್ರಕಲಾ, ಶಿವಮ್ಮ, ಪಾರ್ವತಿ ಎಂಬುವವರು ಈ ಕೃತ್ಯ ಎಸಗಿದ್ದಾರೆ ಎಂದು ದೂರು ನೀಡಲಾಗಿದೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ:ಮೈಸೂರು ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

ABOUT THE AUTHOR

...view details