ಕರ್ನಾಟಕ

karnataka

ETV Bharat / state

ಗುಳೆ ಹೋಗಿ ಬರುವವರನ್ನು ಕ್ವಾರಂಟೈನಲ್ಲಿರಿಸಲು ಹೊಸ ವ್ಯವಸ್ಥೆ - ಗುಳೆ ಹೋಗಿ ಬರುವವರನ್ನು ಕ್ವಾರಂಟೈನಲ್ಲಿರಿಸಲು ಹೊಸದೊಂದು ಕ್ವಾರಂಟೈನ್ ಸಿದ್ಧತೆ

ಸುರಪುರ ತಾಲೂಕಿನಿಂದ ಮಹಾರಾಷ್ಟ್ರ ಗೋವಾಕ್ಕೆ ಗುಳೆ ಹೋಗಿ ಬರುವವರನ್ನು ಕ್ವಾರಂಟೈನಲ್ಲಿರಿಸಲು ಹೊಸದೊಂದು ಕ್ವಾರಂಟೈನ್ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಹಶೀಲ್ದಾರ್ ಸೇರಿ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Surapura
ಗುಳೆ ಹೋಗಿ ಬರುವವರನ್ನು ಕ್ವಾರಂಟೈನಲ್ಲಿರಿಸಲು ಹೊಸದೊಂದು ಕ್ವಾರಂಟೈನ್ ಸಿದ್ಧತೆ

By

Published : May 9, 2020, 7:32 PM IST

ಸುರಪುರ:ಸುರಪುರ ಮತ್ತು ಹುಣಸಗಿ ತಾಲೂಕಿನ ಜನರು ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ಗುಳೆ ಹೋಗಿದ್ದವರನ್ನು ಕರೆತರಲು ಸರ್ಕಾರ ಸಿದ್ಧತೆ ಮಾಡಿಕೊಂಡಿರುವಂತೆ, ಆ ಎಲ್ಲ ಗುಳೆ ಹೋಗಿ ಬಂದವರನ್ನು ಕ್ವಾರಂಟೈನ್‌ನಲ್ಲಿ ಇರಿಸಲು ಹೊಸದಾಗಿ ಕ್ವಾರಂಟೈನ್ ಸಿದ್ಧಗೊಳಿಸಲಾಗುತ್ತಿದೆ ಎಂದು ತಹಶೀಲ್ದಾರ್​ ನಿಂಗಣ್ಣ ಬಿರಾದಾರ್ ತಿಳಿಸಿದರು.

ಗುಳೆ ಹೋಗಿ ಬರುವವರನ್ನು ಕ್ವಾರಂಟೈನಲ್ಲಿರಿಸಲು ಹೊಸ ವ್ಯವಸ್ಥೆ

ನಗರದ ಹೊರಭಾಗದಲ್ಲಿರುವ ಡಿಪ್ಲೋಮಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಕ್ವಾರಂಟೈನ್ ಸೆಂಟರ್‌ಗೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು. ಈಗ ಬರುತ್ತಿರುವವರನ್ನು ಹೆಚ್ಚಿನ ನಿಗಾವಹಿಸಬೇಕಿರುವುದರಿಂದ ಸಿದ್ಧತೆ ಭರದಿಂದ ನಡೆಸಲಾಗಿದೆ. ಇನ್ನೆರಡು ದಿನಗಳಲ್ಲಿ ಮಹಾರಾಷ್ಟ್ರದಿಂದ ಸಾವಿರಾರು ಸಂಖ್ಯೆಯಲ್ಲಿ ಗುಳೆ ಹೋದವರು ಬರಲಿದ್ದು, ಎಲ್ಲರನ್ನೂ14 ದಿನಗಳ ಕಾಲ ಕ್ವಾರಂಟೈನ್ ಸೆಂಟರ್‌ನಲ್ಲಿರಿಸಿ ಆರಾಮವಾಗಿದ್ದವರನ್ನು ಅವರ ಮನೆಗೆ ಕಳುಹಿಸಲಾಗುವುದು, ಆರೋಗ್ಯದಲ್ಲಿ ಏರುಪೇರು ಕಂಡು ಬಂದವರನ್ನು ಐಸೋಲೇಷನ್ ಸೆಂಟರ್​ನಲ್ಲಿ ಇಡಲಾಗುವುದು ಎಂದು ತಿಳಿಸಿದರು.

ABOUT THE AUTHOR

...view details