ಯಾದಗಿರಿ:ಫೆಬ್ರವರಿ 8 ಹಾಗೂ 9ರಂದು ನಮ್ಮ ಮಠದ ಜಾತ್ರೆ ಇದೆ. ಅದೇ ಜಾತ್ರೆಯಲ್ಲಿ 7.5 ಮೀಸಲಾತಿ ಘೋಷಣೆಯಾಗಬೇಕು, 7.5 ಮೀಸಲಾತಿ ಶೀಘ್ರವಾಗಿ ಜಾರಿಯಾಗದಿದ್ದರೆ, ನಮ್ಮ ಸಮಾಜದ 15 ಶಾಸಕರು ಸಾಮೂಹಿಕವಾಗಿ ರಾಜೀನಾಮೆಗೆ ಸಿದ್ಧರಿದ್ದಾರೆ ಅಂತ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದ ಪುರಿ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ
ಯಾದಗಿರಿಯ ಸರ್ಕಿಟ್ ಹೌಸ್ನಲ್ಲಿ ಜಾತ್ರೆಯ ಪೋಸ್ಟರ್ ಬಿಡುಗಡೆಗೊಳಿಸಿ, ಮಾಧ್ಯಮಗಳಿಗೆ ಮಾತನಾಡಿದ ಅವರು, ಬಿಜೆಪಿ ನಮ್ಮ ಸಮುದಾಯದ ಶಾಸಕರನ್ನು ಡಿಸಿಎಂ ಮಾಡುವ ಭರವಸೆ ನೀಡಿ ಹೈಜಾಕ್ ಮಾಡಿದ್ದಾರೆ. ಆದ್ರೆ ಸ್ಥಾನ ನೀಡಲು ಯಾಕೆ ತಡ ಮಾಡುತ್ತಿದ್ದಾರೋ ಗೊತ್ತಿಲ್ಲ. ನಮ್ಮ ಸಮಾಜದ ಸಚಿವರಿಗೆ ಡಿಸಿಎಂ ಸ್ಥಾನ ನೀಡಲೇಬೇಕು ಮತ್ತು ಸುರಪುರದ ಶಾಸಕ ರಾಜೂಗೌಡರಿಗೆ ಸಚಿವ ಸ್ಥಾನ ನೀಡಬೇಕುಎಂದು ಬಿಜೆಪಿ ನಾಯಕರಿಗೆ ಒತ್ತಾಯಿಸಿದ್ರು.