ಕರ್ನಾಟಕ

karnataka

ETV Bharat / state

ರೌಡಿ ಶೀಟರ್​​ ಹತ್ಯೆ ಪ್ರಕರಣ : ತಂದೆ ಮಕ್ಕಳನ್ನು ಬಂಧಿಸಿದ ಗುರುಮಿಠಕಲ್​ ಪೊಲೀಸರು - ಪರಮೇಶ್ವರಪಲ್ಲಿ ರೌಡಿ ಹತ್ಯೆ ಪ್ರಕರಣ

ಮದುವೆ ಮನೆಯಲ್ಲಿ ಕುಡಿದು ಗಲಾಟೆ ನಡೆಸಿದ ರೌಡಿ ಶೀಟರ್ ಮಹ್ಮದ್ ಹನಿಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಜನ ಆರೋಪಿಗಳನ್ನ ಬಂಧಿಸುವಲ್ಲಿ ಗುರುಮಿಠಕಲ್​ ಪೊಲೀಸರು ಯಶಸ್ವಿಯಾಗಿದ್ದಾರೆ.

prameshwarpalli-murder-accused-arrest
ರೌಡಿ ಶೀಟರ್​​ ಹತ್ಯೆ ಪ್ರಕರಣ

By

Published : Aug 14, 2020, 10:44 PM IST

ಯಾದಗಿರಿ: ಜಿಲ್ಲೆಯ ಗುರಮಿಠಕಲ್ ತಾಲೂಕಿನ ಪರಮೇಶಪಲ್ಲಿ ಗ್ರಾಮದ ಮದುವೆ ಮನೆಯಲ್ಲಿ ಕುಡಿದು ಗಲಾಟೆ ನಡೆಸಿದ ರೌಡಿ ಶೀಟರ್ ಮಹ್ಮದ್ ಹನಿಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಜನ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇದೆ ತಿಂಗಳು ಅಗಸ್ಟ್ 10 ರಂದು ಪರಮೇಶಪಲ್ಲಿ ಗ್ರಾಮದ ಮದುವೆ ಮನೆಯಲ್ಲಿ ಕುಡಿದು ಗಲಾಟೆ ಮಾಡಿದ ರೌಡಿ ಶೀಟರ್ ಮಹಮ್ಮದ್ ಹನಿಫನನ್ನ ಮದುಮಗಳ ತಂದೆ ಗುಲಾಮ ರಸೂಲ್ ಸೇರಿದಂತೆ ಆತನ ಮೂರು ಜನ ಮಕ್ಕಳು ಬಡಿಗೆ ಮತ್ತು ರಾಡ್ ನಿಂದ ಹೊಡೆದು ಹತ್ಯೆಗೈದು ಪರಾರಿಯಾಗಿದ್ದರು.

ಮಹಮ್ಮದ್ ಹನಿಫ್​​ನ ತಾಯಿ ಮಾಲನಬಿ ಗುರಮಿಠಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಿಪಿಐ ದೇವೇಂದ್ರಪ್ಪ ನೇತ್ರತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಗಳಾದ ತಂದೆ, ಮಕ್ಕಳನ್ನು ಬಂಧಿಸಿ, ಕೊಲೆಗೆ ಬಳಸಿದ ಸಲಕರಣೆಗಳನ್ನು ವಶಕ್ಕೆ ಪಡೆದಿದ್ದಾರೆ.

ಅಲ್ಲದೆ ಕೊಲೆಯಾದ ರೌಡಿ ಶೀಟರ್ ಮೇಲೆ ಗುರಮಿಠಕಲ್ ಪೊಲೀಸ್​​ ಠಾಣೆಯಲ್ಲಿ ಕೊಲೆ, ಸುಲಿಗೆ, ದೊಂಬಿ ಪ್ರಕರಣಗಳು ದಾಖಲಾಗಿದ್ದವು ಎನ್ನಲಾಗಿದೆ.

ABOUT THE AUTHOR

...view details