ಯಾದಗಿರಿ: ಕರುಣಾಕರ ರೆಡ್ಡಿ ಹೆಸರಿನಂತೆ ಕೊರೊನಾ ಹೆಸರಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ವ್ಯಂಗ್ಯವಾಡಿದ್ದಾರೆ.
ಕೊರೊನಾ ವೈರಸ್ 'ಕರುಣಾಕರ ರೆಡ್ಡಿ' ಹೆಸರಿನಂತಿದೆ: ಪ್ರಭು ಚೌವ್ಹಾಣ್ ವ್ಯಂಗ್ಯ - ಪ್ರಭು ಚೌವ್ಹಾಣ್ ಸುದ್ದಿ
ಕರುಣಾಕರ ರೆಡ್ಡಿ ಹೆಸರಿನಂತೆ ಕೊರೊನಾ ಹೆಸರಿದೆ ಎಂದು ಹೇಳುವ ಮೂಲಕ ಪಶುಸಂಗೋಪನಾ ಸಚಿವ ಪ್ರಭು ರ್ಚವ್ಹಾಣ್ ವ್ಯಂಗ್ಯವಾಡಿದ್ದಾರೆ.
![ಕೊರೊನಾ ವೈರಸ್ 'ಕರುಣಾಕರ ರೆಡ್ಡಿ' ಹೆಸರಿನಂತಿದೆ: ಪ್ರಭು ಚೌವ್ಹಾಣ್ ವ್ಯಂಗ್ಯ prabhu-chauvhan](https://etvbharatimages.akamaized.net/etvbharat/prod-images/768-512-6328887-thumbnail-3x2-dr.jpg)
ನಗರದ ಜಿಲ್ಲಾಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಜನೌಷಧಿ ಕೇಂದ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಈಗ ಕೊರೊನಾ ವೈರಸ್ ಕುರಿತು ಬಹಳಷ್ಟು ಸುದ್ದಿಗಳು ಹರಿದಾಡುತ್ತಿವೆ. ಇದರ ಬಗ್ಗೆ ಜನರು ಹೆದರುವ ಅವಶ್ಯಕತೆ ಇಲ್ಲ. ಕೊರೊನಾ ವೈರಸ್ನಂತೆ ಕರುಣಾಕರ ರೆಡ್ಡಿ ಹೆಸರಿದೆ ಎಂದು ವ್ಯಂಗ್ಯವಾಡಿದರು.
ನಮ್ಮ ದೇಶದ ಉಷ್ಣಾಂಶಕ್ಕೆ ಕೊರೊನಾ ಓಡಿ ಹೋಗುತ್ತೆ. ಇಲ್ಲಿನ ತಾಪಮಾನಕ್ಕೆ ಅದು ಸತ್ತು ಹೋಗುತ್ತೆ ಎಂದ್ರು. ಈ ಕುರಿತು ಸಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವದಂತಿ ವೈರಲ್ ಮಾಡಲಾಗುತ್ತಿದ್ದು, ಸಮಾಜಿಕ ಜಾಲತಾಣಗಳ ಸುದ್ದಿಗಳ ಕುರಿತು ತಲೆ ಕೆಡಿಸಿಕೊಳ್ಳಬೇಡಿ ಎಂದು ಸಾರ್ವಜನಿಕರಲ್ಲಿ ಕೋರಿದರು.