ಕರ್ನಾಟಕ

karnataka

ETV Bharat / state

ಗುದ್ದಲಿ ಹಿಡಿದು ರೋಡಿಗಿಳಿದ ಪೊಲೀಸರು.. ಯಾಕ್ರೀ ಏನಾಯ್ತು.. - ಯಾದಗಿರಿ ಜಿಲ್ಲೆ ಸುರಪುರ ಠಾಣೆ ಖಾಕಿ ಪಡೆ

ಪೊಲೀಸರು ಲಾಠಿ ಹಿಡಿಯುವ ತಮ್ಮ ಕೈಯಲ್ಲಿ ಇಂದು ಸಲಿಕೆ, ಗುದ್ದಲಿ ಹಿಡಿದು ಸ್ವತಃ ತಾವೇ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಕೈ ಜೋಡಿಸುವ ಮೂಲಕ ಜನ ಸಾಮಾನ್ಯರಿಂದ ಸೈ ಎನಿಸಿಕೊಂಡಿದ್ದಾರೆ‌.

ಗುದ್ದಲಿ ಹಿಡಿದು ರೋಡಿಗಿಳಿದ ಖಾಕಿ..!

By

Published : Sep 30, 2019, 8:37 PM IST

ಯಾದಗಿರಿ:ಪೊಲೀಸರು ಲಾಠಿ ಹಿಡಿಯುವ ತಮ್ಮ ಕೈಯಲ್ಲಿ ಇಂದು ಸಲಿಕೆ, ಗುದ್ದಲಿ ಹಿಡಿದು ಸ್ವತಃ ತಾವೇ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಕೈಜೋಡಿಸುವ ಮೂಲಕ ಜನ ಸಾಮಾನ್ಯರಿಂದ ಸೈ ಎನಿಸಿಕೊಂಡಿದ್ದಾರೆ‌.

ಲಾಠಿ ಹಿಡಿದು ಜನರ ಮೇಲೆ ರೇಗಾಡುವುದೇ ಖಾಕಿ ಪಡೆಯ ಕೆಲಸ ಎಂದು ತಿಳಿದುಕೊಂಡಿದ್ದ ಜನರಿಗೆ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡುವ ಮೂಲಕ ಪೊಲೀಸರಲ್ಲಿಯೂ ಮಾನವೀಯತೆಯ ಗುಣ ಇರುತ್ತದೆ ಎನ್ನುವುದನ್ನು ಯಾದಗಿರಿ ಜಿಲ್ಲೆಯ ಸುರಪುರ ಠಾಣೆ ಖಾಕಿ ಪಡೆ ತೋರಿಸಿಕೊಟ್ಟಿದೆ.

ಗುದ್ದಲಿ ಹಿಡಿದು ರೋಡಿಗಿಳಿದ ಪೊಲೀಸರು..

ನಗರದ ಗಾಂಧಿ ವೃತ್ತದ ರಸ್ತೆಯಲ್ಲಿ ಗುಂಡಿ ಕಾಣಿಸಿಕೊಂಡು ರಸ್ತೆ ಅಪಘಾತ ಹೆಚ್ಚುತ್ತಿರುವುದರಿಂದ ಎಚ್ಚೆತ್ತ ಸುರಪುರ ಠಾಣೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಸ್ವತಃ ತಾವೇ ರಸ್ತೆ ಗುಂಡಿಗಳಿಗೆ ಕಾಂಕ್ರೀಟ್ ಹಾಕಿ ಗುಂಡಿಗಳಿಗೆ ಮುಕ್ತಿ ನೀಡಿದ್ದಾರೆ. ಗುಂಡಿ ಮುಚ್ಚಲು ಕಾರ್ಮಿಕರಿಗಾಗಿ ಕಾಯದೇ ತಾವೇ ಮುಂದೆ ನಿಂತು ಈ ಕೆಲಸ ಮಾಡಿದ್ದು ಪೊಲೀಸರ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details